ಉದಯವಾಹಿನಿ, ಯೋಗಾಸನ ಇಂದು ಇಡೀ ವಿಶ್ವದದ್ಯಾಂತ ಪಸರಿಸಿದೆ. ಯೋಗಕ್ಕೆ ಇಷ್ಟೊಂದು ಡಿಮ್ಯಾಂಡ್​ ಬರಲು ಹಲವಾರು ಕಾರಣಗಳಿವೆ. ಒಂದು ಯೋಗಸಾನ ಮಾಡುವುದರಿಂದ ಆರೋಗ್ಯದಲ್ಲಿ ತುಂಬಾ ಸುಧಾರಣೆಗಳು ಕಾಣಬಹುದು. ಬೊಜ್ಜು ಹೊಂದಿದವರು ನಿರಂತರ ಯೋಗದಿಂದ ಸ್ಲಿಮ್​ ಆಗಿ ಆಕರ್ಷಣಕರವಾಗಿ ಕಾಣಬಹುದು. ಅಲ್ಲದೇ ಆಯಸ್ಸು ಕೂಡ ವೃದ್ಧಿಯಾಗುತ್ತದೆ.
ನಿತ್ಯ ಮನೆಯಲ್ಲಿ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಲಭಗೊಳ್ಳುತ್ತದೆ. ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯೋಗ ಒಳ್ಳೆಯ ಉಪಾಯ ಜೊತೆಗೆ ಯೋಗದಿಂದ ಮನಸ್ಸು ಮತ್ತು ದೇಹ ಆರೋಗ್ಯವಾಗಿರುತ್ತವೆ. ಒತ್ತಡದಲ್ಲಿರುವ ಮನಸನ್ನು ಶಾಂತ ರೀತಿಗೆ ತರುವಂತಹ ಕೆಲಸ ಯೋಗ ಮಾಡುತ್ತದೆ. ದೇಹದಲ್ಲಿ ಬೊಜ್ಜು ಹೆಚ್ಚಾಗಿದ್ದರೆ ನಿತ್ಯ ಯೋಗಾಸನ ಮಾಡುವುದರಿಂದ ದೇಹವು ತೂಕವನ್ನು ಕಳೆದುಕೊಂಡು ಸುಂದರ ಮತ್ತು ದೃಢವಾಗಬಹುದು.
ರಕ್ತದ ಒತ್ತಡ, ಕಡಿಮೆ ತೂಕ, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಕೊಲೆಸ್ಟ್ರಾಲ್ ಅನ್ನು ಹತೋಟಿಗೆ ತರುವುದರಿಂದ ಯೋಗ ಸಕಾರಾತ್ಮಕವಾದ ಪರಿಣಾಮ ನೀಡುತ್ತದೆ. ಹೀಗಾಗಿಯೇ ಇಂದು ಜಗತ್ತಿನಾದ್ಯಂತ ಎಲ್ಲರೂ ಯೋಗವನ್ನು ಮೆಚ್ಚಿಕೊಂಡಿದ್ದಾರೆ. ಯೋಗದಿಂದ ದೇಹದಲ್ಲಿ ಉಸಿರಾಟ, ರಕ್ತ ಸಂಚಲನ ಸರಾಗವಾಗುತ್ತದೆ. ಆಮ್ಲಜನಕ, ಜೀವಸತ್ವಗಳು ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ಸಂಚಲನ ಆಗುತ್ತವೆ. ಹೀಗಾಗಿ ಅಂಗಗಳು ಆರೋಗ್ಯಯುತ ಆಗುವುದರ ಜೊತೆ ಚರ್ಮ​ ಕಾಂತಿಮಯ ಉಂಟಾಗುತ್ತದೆ. ಹೊಟ್ಟೆ ಕರಗಿಸಬೇಕೆಂದರೆ ನೌಕಾಸನ, ಉಷ್ಟ್ರಾಸನದ ಜೊತೆ ಜೊತೆಗೆ ಇನ್ನು ಕೆಲ ಆಸನಗಳನ್ನು ನಿತ್ಯ ಮಾಡಿದ್ರೆ ಹೊಟ್ಟೆ ತೆಳ್ಳಗಾಗುತ್ತದೆ. ಹಾಗೂ ನೀವು ನೋಡಲು ಅಂದವಾಗಿ ಕಾಣುತ್ತೀರಿ. ಜಿಮ್​ಗೆ ಹೋಗುವ ಅವಶ್ಯಕತೆ ಇಲ್ಲ.

Leave a Reply

Your email address will not be published. Required fields are marked *

error: Content is protected !!