ಉದಯವಾಹಿನಿ, ನವದೆಹಲಿ: ರಸ್ತೆಯಲ್ಲಿ ಸಂಚಾರ ಮಾಡುವಾಗ ಎಷ್ಟು ಸುರಕ್ಷಿತ ವಾಗಿದ್ದರೂ ಅದು ಕಡಿಮೆ ಎಂದು ಹೇಳಬಹುದು. ಎಷ್ಟೇ ಜಾಗೃತಿ ಯಿಂದ ವಾಹನ ಚಲಾಯಿಸಿದರೂ ಗ್ರಹಚಾರ ಎಂಬಂತೆ ಅಪಘಾತಗಳು ಸಂಭವಿಸಿ ಸಾವನಪ್ಪುವುದು ಇದೆ. ಇಂತಹ ಅಪಘಾತಗಳು ಕೆಲವೊಮ್ಮ ಬಹಳ ಭೀಕರವಾಗಿರುತ್ತದೆ. ಅಂತೆಯೇ 18 ವರ್ಷದ ಯುವತಿಯೊಬ್ಬಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಅಚಾನಕ್ ಆಗಿ ರಸ್ತೆಗೆ ಬಿದ್ದು ಅಪಘಾತ ಆಗಿದ್ದ ಘಟನೆ ಟೆನ್ನೆಸ್ಸೀಯ ಮೆಂಫಿಸ್ ನಲ್ಲಿರುವ ಯೂನಿಯನ್ ಅವೆನ್ಯೂನಲ್ಲಿ ನಡೆದಿದೆ. ರಸ್ತೆಯಲ್ಲಿ ಆಕೆ ಬಿದ್ದಿದ್ದ ಪರಿಣಾಮ ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಕಾರು ಯುವತಿ ಮೇಲೆ ಹರಿದಿದೆ. ಈ ರಸ್ತೆ ಅಪಘಾತದಲ್ಲಿ ಕೆಲವೇ ಕ್ಷಣಗಳಲ್ಲಿ ಆಕೆ ಸಾವನ್ನಪ್ಪಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ ಅಪಘಾತದ ಭಯಾನಕ ಕ್ಷಣಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆ ಯಾಗಿದ್ದನ್ನು ಕಾಣಬಹುದು. ನವೆಂಬರ್ 14ರ ರಾತ್ರಿಯಂದು 18ವರ್ಷದ ಯುವತಿಯು ತನ್ನ ಎಲೆಕ್ಟ್ರಾನಿಕ್ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದಳು. ಟ್ರಾಫಿಕ್ ಸಿಗ್ನಲ್ ಇದ್ದ ಕಾರಣ ಮುಖ್ಯ ರಸ್ತೆಯ ಎಲ್ಲ ವಾಹನಗಳು ಸ್ತಬ್ಧವಾಗಿ ನಿಂತಿದ್ದವು. ಅದೇ ವೇಳೆ ಮಹಿಳೆಯೂ ಒಳರಸ್ತೆಯ ಬೀದಿಯಿಂದ ತನ್ನ ಎಲೆಕ್ಟ್ರಾನಿಕ್ ಮಿನಿ ಸ್ಕೂಟರ್ ನಲ್ಲಿ ಬರುತ್ತಿ ದ್ದಳು. ಈ ಸಂದರ್ಭ ಆಕೆಯ ಎಲೆಕ್ಟ್ರಾನಿಕ್ ವೆಹಿಕಲ್ ಸ್ಕಿಡ್ ಆಗಿದ್ದು ಯುವತಿ ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬಿದ್ದಿದ್ದ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.
