
ಉದಯವಾಹಿನಿ, ಮುಂಬೈ: ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಆಘಾತಕಾರಿ ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ. ರಸ್ತೆಯಲ್ಲಿ ಭೀಕರ ಅಪಘಾತ, ಹಾಡ ಹಗಲೇ ನಡೆಯುವ ಕೊಲೆ, ದರೋಡೆ ಇನ್ನಿತರ ಭಯಾನಕ ವಿಡಿಯೊಗಳು ಆನ್‌ಲೈನ್‌ನಲ್ಲಿ ಸಂಚನ ಉಂಟು ಮಾಡುತ್ತವೆ. ಇದೀಗ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಾಡ ಹಗಲೇ ಗುಂಡಿನ ದಾಳಿ ನಡೆದ ಘಟನೆ ಮಹಾರಾಷ್ಟ್ರದ ಕಂಡಿವಲಿಯ ಚಾರ್ಕೋಪ್‌ನಲ್ಲಿ ನಡೆದಿದೆ.
ಈ ಘಟನೆಯ ಸಿಸಿಟಿವಿ ಫುಟೇಜ್ ವೈರಲ್ ಆಗಿದೆ. ಬೈಕ್‌ನಲ್ಲಿ ಬಂದ ಮೂವರು ಶೂಟರ್‌ಗಳ ಬಗ್ಗೆ ತನಿಖೆ ನಡೆಸಲಾಗಿದ್ದು ದಾಳಿಯ ಮಾಸ್ಟರ್ ಮೈಂಡ್ ಮುನ್ನಾ ಮಯುದ್ದೀನ್ ಶೇಖ್ (34)ನನ್ನು ಚಾರ್ಕೋಪ್ ಪೊಲೀಸರು ನವೆಂಬರ್ 20ರಂದು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ತನಿಖೆ ಮಾಡಲಾಗುತ್ತಿದೆ.ಕಂಡಿವಲಿಯ ಚಾರ್ಕೋಪ್‌ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಫ್ರೆಡ್ಡಿ ಡಿ’ಲಿಮಾ ಮೇಲೆ ಹಾಡ ಹಗಲೇ ಗುಂಡಿನ ದಾಳಿ ನಡೆದಿದ್ದು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.
