ಉದಯವಾಹಿನಿ, ತಾಲಿಬಾನ್ & ಪಾಕಿಸ್ತಾನ ನಡುವೆ ಕೆಲವು ವಾರಗಳ ಹಿಂದೆ ದೊಡ್ಡ ಗಲಾಟೆ ನಡೆದಿತ್ತು,  ಹೀಗೆ ಇಬ್ಬರೂ ಬಡಿದಾಡಿಕೊಂಡು ಹತ್ತಾರು ಜೀವಗಳು ಕೂಡ ಬಲಿಯಾಗಿದ್ದವು.  ಅಲ್ಲದೆ ಪಾಪಿ ಪಾಕ್ ತಾನು ಮಾಡಿದ ಕೃತ್ಯಕ್ಕೆ ಸರಿಯಾಗಿ ಪಾಠ ಕೂಡ ಕಲಿತಿದೆ. ಪರಿಸ್ಥಿತಿ ಇಷ್ಟೆಲ್ಲಾ ವಿನಾಶಕಾರಿಯಾಗಿ ಇರುವಾಗ ಮತ್ತೆ ಇಬ್ಬರ ನಡುವೆ ಯುದ್ಧ ಶುರುವಾಗುತ್ತಾ..? ಎಂಬ ಆತಂಕ ಕೂಡ ಇದ್ದೇ ಇದೆ. ಹೀಗಿದ್ದಾಗ ದಿಢೀರ್ ಪಾಕಿಸ್ತಾನದ ರಾಜಕಾರಣಿಗಳು  ಡಿಸೈನ್ ಹೇಳಿಕೆಯನ್ನು ನೀಡುತ್ತಿದ್ದು, ತಾಲಿಬಾನ್ ಕೂಡ ಪಾಕಿಸ್ತಾನ ವಿರುದ್ಧ ಮತ್ತೆ ರೊಚ್ಚಿಗೆದ್ದಿದೆ.  ಯಾರು ಎಷ್ಟೇ ಹೇಳಲಿ ಪಾಕಿಸ್ತಾನದ ಬುದ್ದಿ ಮಾತ್ರ ಬದಲಾಗುವುದಿಲ್ಲ, ಹಾಗೇ ಪಾಕಿಸ್ತಾನ ತನ್ನ ಅಕ್ಕಪಕ್ಕದ ದೇಶಗಳ ಜೊತೆಗೆ ಕಿರಿಕ್ ತೆಗೆಯುವುದು ಕೂಡ ನಿಲ್ಲುವುದಿಲ್ಲ ಅನ್ನೋದು ಮತ್ತೆ ಮತ್ತೆ ಪೂವ್ ಆಗುತ್ತಿದೆ. ಅದರಲ್ಲೂ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಜೊತೆಗೆ ರಾಜಿ ಮಾಡಿಕೊಳ್ಳುವ ಮಾತು ಆಡುತ್ತಲೇ ಬೆನ್ನಿಗೆ ಚೂರಿ ಹಾಕುವ ಪ್ರಯತ್ನ ಕೂಡ ಪಾಕಿಸ್ತಾನ ಕಡೆಯಿಂದ ಈಗ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೇ ಪಾಕಿಸ್ತಾನದ ಈ ನಡೆ ವಿರುದ್ಧ ತಾಲಿಬಾನ್ ಕೂಡ ರೊಚ್ಚಿಗೆದ್ದು ಕೂತಿದ್ದು, ಇನ್ನೊಮ್ಮೆ ಯುದ್ಧದ ಆತಂಕ ಗಡಿ ಭಾಗದಲ್ಲಿ ಇದೀಗ ಆವರಿಸಿದೆ.

ಗುಪ್ತವಾಗಿ ದಾಳಿಗೆ ಪಾಕಿಸ್ತಾನ ಪ್ಲಾನ್..?: ಒಂದು ಕಡೆ ತಾಲಿಬಾನ್ ಜೊತೆಗೆ ಮಾತುಕತೆ ಮಾಡಿ & ಸಂಘರ್ಷ ಸರಿ ಮಾಡಲು ಸಿದ್ದ ಅಂತಾ ಹೇಳುತ್ತಿರುವ ಪಾಕಿಸ್ತಾನ, ಇನ್ನೊಂದು ಕಡೆ ಗುಟ್ಟಾಗಿ ದಾಳಿ ಮಾಡಲು ಸ್ಕೆಚ್ ಹಾಕಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಹಾಗೇ ಪಾಕಿಸ್ತಾನದ ಈ ರೀತಿಯ ಬುದ್ದಿ ಬಗ್ಗೆ ಮೊದಲೇ ಚನ್ನಾಗಿ ಅರಿತಿರುವ ತಾಲಿಬಾನ್ ಪಡೆಗಳು ಹಾಗೂ ಅಫ್ಘಾನಿಸ್ತಾನದ ಯೋಧರು ಪಾಕ್ ದಾಳಿಗೆ ಪ್ರತ್ಯುತ್ತರ ಕೊಡಲು ಸಜ್ಜಾಗಿದ್ದಾರೆ. ಎಲ್ಲಾ ಇನ್ನೇನು ಸರಿ ಆಯ್ತು, ನೆಮ್ಮದಿ ನೆಲೆಸಲಿದೆ ಎನ್ನುವಾಗಲೇ ಈ ರೀತಿಯಾಗಿ ಪಾಕಿಸ್ತಾನ ಮತ್ತೆ ಕುತಂತ್ರ ಮಾಡುತ್ತಿರುವ ಆರೋಪ ಸಂಚಲನ ಸೃಷ್ಟಿ ಮಾಡಿದೆ.

ಗಡಿ ಭಾಗದಲ್ಲಿ ಮತ್ತೆ ಸೂಕ್ಷ್ಮ ಪರಿಸ್ಥಿತಿ: ಒಟ್ನಲ್ಲಿ ತಾಲಿಬಾನ್ ವಿರುದ್ಧ ಸಂಘರ್ಷಕ್ಕೆ ಇಳಿದು ಪಾಕಿಸ್ತಾನ ದೊಡ್ಡ ತಪ್ಪನ್ನೇ ಮಾಡಿಕೊಂಡಿದೆ. ಅದರಲ್ಲೂ ಭಾರತದ ಜೊತೆಗೆ ಉತ್ತಮ ಸ್ನೇಹ ಹೊಂದಿರುವ ತಾಲಿಬಾನ ಸರ್ಕಾರದ ವಿರುದ್ಧ ಈ ರೀತಿ ಪದೇ ಪದೇ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿ ತೋರಿಸುತ್ತಿದೆ ಅಲ್ಲದೆ ಪಾಕ್ ಮಾಡ್ತಿರುವ ಇಂತಹ ಕೃತ್ಯಗಳಿಂದ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಅಫ್ಘಾನಿಸ್ತಾನ ಗಡಿ ಭಾಗದಲ್ಲಿ ಸೃಷ್ಟಿ ಆಗುತ್ತಿದೆ. ಹೀಗಾಗಿ ಇಬ್ಬರ ನಡುವಿನ ಈ ತಿಕ್ಕಾಟವು ಯಾವಾಗ ನಿಲ್ಲಲಿದೆ? ಎಂಬುದನ್ನ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!