ಉದಯವಾಹಿನಿ, ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಅರುಣ್ ಕುಮಾರ್ ಆಜಾದ್ನನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈತನ ಪಾತ್ರ ಹಾಗೂ ಸಹಾಯದ ಬಗ್ಗೆ ಈಗಷ್ಟೇ ಗೊತ್ತಾಗಬೇಕಿದೆ ಎಂದು ಹೇಳಿದ್ದಾರೆ. ಆರೋಪಿ ಅರುಣ್ ಕುಮಾರ್ ಆಜಾದ್ನನ್ನು ಜು. 12ರ ರಾತ್ರಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಎಂಡಿ ಫಣೀಂದ್ರ ಮತ್ತು ಸಿಇಒ ವಿನುಕುಮಾರ್ ಕೊಲೆಗೆ ಸುಪಾರಿ ನೀಡಿರುವುದಾಗಿ ಹೇಳಿದ್ದಾನೆ.
ಅರುಣ್ ಕುಮಾರ್ ಜಿ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಕಂಪನಿ ನಡೆಸುತ್ತಿದ್ದ. ಕೈಯಲ್ಲಿ ಗನ್ ಹಿಡಿದು ಬಿಲ್ಡಪ್ ಕೊಡುತ್ತಿದ್ದ. ತನ್ನ ವ್ಯಾವಹಾರಕ್ಕೆ ಅಡ್ಡ ಬರುವವರಿಗೆ ಹೆದರಿಸಿ, ಅಲ್ಲಿಗೆ ಯಾರು ಸುಳಿಯದಂತೆ ಹವಾ ಮೈಂಟೇನ್ ಮಾಡುತ್ತಿದ್ದ. ಬೇರೆ ಇಂಟರ್ನೆಟ್ ಕೆಬಲ್ನವರು ಬಂದರೆ ಸಾಕು ಅವರಿಗೆ ಅವಾಜ್ ಹಾಕಿ ಕುಳಿಸುತ್ತಿದ್ದ. ಸ್ಥಳೀಯ ಶಾಸಕರ ಜೊತೆ ಕೂಡ ಅರುಣ್ ಕುಮಾರ್ ಗುರುತಿಸಿಕೊಂಡಿದ್ದ. YKPL ಹೆಸರಿನಲ್ಲಿ ಕಬ್ಬಡಿ ಟೂರ್ನಮೆಂಟ್ ಸಹ ಆಯೋಜನೆ ಮಾಡಿದ್ದ. ಸಮಾಜ ಸೇವಕನ ರೀತಿಯಲ್ಲಿ ಪೋಸ್ ಕೊಡುತ್ತಿದ್ದ. ಶಾಸಕರ ಜತೆಯಿದ್ದು, ನಂತರ ಒನ್ ಫೋರ್ಸ್ ಸಂಘಟನೆ ಮಾಡಿಕೊಂಡಿದ್ದ.
