ಉದಯವಾಹಿನಿ, ಚಳಿಗಾಲದ ಜೊತೆ ಹಲವು ಆರೋಗ್ಯ ಸಮಸ್ಯೆಗಳು ಸಹ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಕೆಮ್ಮು, ಶೀತ, ಗಂಟಲು ನೋವು, ಜ್ವರ ತಪ್ಪುವುದಿಲ್ಲ.  ಚಳಿಗಾಲದಲ್ಲಿ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸುವುದು ಮುಖ್ಯ.  ಹೆಚ್ಚಿನವರು ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಹೀಗೆ ಹುಷಾರು ತಪ್ಪಿದಾಗ ಇಂಗ್ಲಿಷ್ ಮದ್ದಿನ ಮೊರೆ ಹೋಗುತ್ತಾರೆ. ಕಹಿ ಕಹಿ ಮಾತ್ರೆಗಳನ್ನು ಕಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ನೀವು ಇಷ್ಟೆಲ್ಲಾ ಕಷ್ಟ ಪಡ್ಬೇಕಾಗಿಲ್ಲ. ಚಳಿಗಾಲದಲ್ಲಿ ನಿಮ್ಮ ಆಹಾರದಲ್ಲಿ ಸೋರೆಕಾಯಿಯನ್ನು ಸೇವಿಸಿ. ಹಲವು ಆರೋಗ್ಯ ಸಮಸ್ಯೆಗಳಿಗೆ ಇದುವೇ ರಾಮಬಾಣ.
ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕುತ್ತದೆ: ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲಿದ್ದು, ಇದು ದೇಹವನ್ನು ನಿರ್ವಿಷಗೊಳಿಸುತ್ತೆ, ಹಾನಿಕಾರಕ ವಿಷ ಹೊರಹಾಕುತ್ತೆ ಮತ್ತು ಮೂತ್ರಕೋಶದ ಕಾರ್ಯ ಸುಧಾರಿಸುತ್ತೆ. ಸೋರೆಕಾಯಿಯಲ್ಲಿ ಹೆಚ್ಚು ಫೈಬರ್ ಅಂಶಗಳು ಇದ್ದು, ಇದು ಮಲಬದ್ಧತೆ, ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣಕಾರಿ ಅಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಈ ಪಾನೀಯ ನೆರವು ಆಗಲಿದ್ದು, ನಿತ್ಯವೂ ಸೋರೆ ಕಾಯಿ ರಸ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು. ಹಾಗಾಗಿ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಈ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ಸೇರಿದಂತೆ ಉದರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯೂ ನಿಮ್ಮನ್ನು ಬಾಧಿಸುವುದಿಲ್ಲ.ಬೂದುಗುಂಬಳವು ತೂಕ ಇಳಿಕೆಗೆ ಸಹಕಾರಿಯಾಗಿದೆ. ಬೂದುಗುಂಬಳದಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ಫೈಬರ್ ಅಂಶ ಹೆಚ್ಚಿರುತ್ತದೆ, ಯೋಗ, ವ್ಯಾಯಾಮದ ಜತೆಗೆ ಬೂದುಗುಂಬಳ ಜ್ಯೂಸ್ ಸೇವನೆಯಿಂದ ತೂಕವನ್ನು ಬಹುಬೇಗ ಕಳೆದುಕೊಳ್ಳಬಹುದು. ಚಳಿಗಾಲದಲ್ಲಿ ಕೂದಲು ಬಿರುಕು ಹಾಗೂ ಚರ್ಮ ಡ್ರೈ ಆಗುವುದು ಇತ್ಯಾದಿ ಸಮಸ್ಯೆಗಳು ಎದುರಾಗುತ್ತದೆ. ಇಂತಹ ವೇಳೆ ಸೋರೆಕಾಯಿ ಜ್ಯೂಸ್ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಪ್ಪಿಸುವುದು.

Leave a Reply

Your email address will not be published. Required fields are marked *

error: Content is protected !!