ಉದಯವಾಹಿನಿ, ಬೆಂಗಳೂರು: ಬದಲಾದ ಜೀವನ ಶೈಲಿಯ ಪರಿಣಾಮವೋ ಅಥವಾ ಇಂದಿನ ಆಹಾರ ಕ್ರಮದ ಪ್ರಭಾವೋ ಏನೋ ಕೆಲವರು ತಾವು ದಪ್ಪ ಆಗಬೇಕು, ತೂಕ ಹೆಚ್ಚಿಸಿಕೊಳ್ಳಬೇಕು ಎಂದು ಸಿಕ್ಕಿದೆಲ್ಲಾ ತಿನ್ನುತ್ತಾರೆ, ಆದರೂ ಅವರು ದಪ್ಪ ಆಗೋದೇ ಇಲ್ಲ… ಅದೇ ಇನ್ನೂ ಕೆಲವರು ತಾವು ಸಣ್ಣ ಆಗಬೇಕು ಬೊಜ್ಜು ಕರಗಿಸಬೇಕು ಅಂತ ಮೂರು ಹೊತ್ತು ತಿನ್ನುತ್ತಾ ಇದ್ದವರು ಎರಡೇ ಹೊತ್ತು ತಿನ್ನಲು ಶುರು ಮಾಡುತ್ತಾರೆ. ಜಿಮ್ ಗೆ ಹೋಗುತ್ತಾರೆ… ಆದರೂ ಸಣ್ಣ ಆಗೋದೇ ಇಲ್ಲ..
ಇಂತಹ ಪರಿಸ್ಥಿತಿಯಲ್ಲಿ, ಖರ್ಜೂರ ನಿಮ್ಮ ತೂಕ ನಿಯಂತ್ರಣಕ್ಕೆ ಸಹಾಯಕವಾಗುವ ಆಹಾರವಾಗಿದ್ದು, ಖರ್ಜೂರ ಜೀರ್ಣಕ್ರಿಯೆ ಸುಧಾರಿಸುವುದು, ಹೊಟ್ಟೆ ತುಂಬಿರುವ ಭಾವನೆ ನೀಡುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸಲು ಸಹ ನೆರವಾಗುತ್ತದೆ.
ಖರ್ಜೂರ ಕೇವಲ ತೂಕ ನಿಯಂತ್ರಣಕ್ಕಷ್ಟೇ ಅಲ್ಲ, ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಪೌಷ್ಠಿಕ ಅಂಶವುಳ್ಳ ಡ್ರೈ ಫ್ರೂಟ್ ಆಗಿದ್ದು, ಇದು ಮೂಳೆಗಳನ್ನು ಗಟ್ಟಿಗೊಳಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಪ್ರತಿ ದಿನ ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಸೇರಿಸಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯಾವಾಗಿದೆ. ನಿಯಮಿತವಾಗಿ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದೆರಡು ಖರ್ಜೂರ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆ.
