ಉದಯವಾಹಿನಿ, ವಾಷಿಂಗ್ಟನ್‌: ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವಂತೆ ಅಮೆರಿಕ (America) ಧಾರ್ಮಿಕ ಸ್ವಾತಂತ್ರ್ಯ ಆಯೋಗ ಟ್ರಂಪ್‌ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಗುಪ್ತಚರ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮೇಲೆ (ಭಾರತದ ಗುಪ್ತಚರ ಸಂಸ್ಥೆ) ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಬಂಧ ವಿಧಿಸಬೇಕು ಎಂದು ಯುನೈಟೆಡ್ ಸ್ಟೇಟ್ಸ್ ಆಯೋಗ ಹೇಳಿದೆ. ವರದಿಯು ಎರಡೂ ಸಂಸ್ಥೆಗಳ ಕಾರ್ಯ ವಿಧಾನಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಾಗರಿಕರ ಮೇಲಿನ ಕಿರುಕುಳದ ಆಧಾರದ ಮೇಲೆ ಭಾರತಕ್ಕೆ ಶಸ್ತ್ರಾಸ್ತ್ರಗಳ ಮಾರಾಟ ನಿಲ್ಲಿಸಲು ಸಹ ಆಯೋಗ ಶಿಫಾರಸು ಮಾಡಿದೆ. ಭಾರತ ಮತ್ತು ಅಮೆರಿಕ ನಡುವಿನ ಭವಿಷ್ಯದ ಮಿಲಿಟರಿ ಮತ್ತು ವ್ಯಾಪಾರ ಸಂಬಂಧವನ್ನು ಧಾರ್ಮಿಕ ಸ್ವಾತಂತ್ರ್ಯದ ಆಧಾರದ ಮೇಲೆ ಪರಿಶೀಲಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆರ್‌ಎಸ್‌ಎಸ್ ವಿರುದ್ಧ ಅಮೇರಿಕನ್ ಸಮಿತಿ ಸೂಚಿಸಿದ ನಿರ್ಬಂಧಗಳಲ್ಲಿ ಸಂಸ್ಥೆಯ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಸದಸ್ಯರು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸುವುದು ಸೇರಿರಬಹುದು.
ಆಯೋಗವು ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ವಿರುದ್ಧವೂ ಶಿಫಾರಸುಗಳನ್ನು ಮಾಡಿದೆ.
ಈ ಶಿಫಾರಸುಗಳನ್ನು ಯುಎಸ್‌ಸಿಐಆರ್‌ಎಫ್‌ನ 2026ರ ವಾರ್ಷಿಕ ವರದಿಯಲ್ಲಿ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!