ಉದಯವಾಹಿನಿ, ಜೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಕಾಣಿಸಿಕೊಂಡಿರುವ ಪಾಡ್ ಕಾಸ್ಟ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ನಿಖಿಲ್ ಕಾಮತ್ ಅವರು ಎಲಾನ್ ಮಸ್ಕ್ ಪಾಡ್‌ಕ್ಯಾಸ್ಟ್ ಅನ್ನು ಟೀಕಿಸುವುದನ್ನು ಕಾಣಬಹುದು. ಕಚೇರಿಯಲ್ಲಿ ಕುಳಿತು ಅವರಿಬ್ಬರೂ ಮಾತುಕತೆ ನಡೆಸುತ್ತಿರುವ ಕಪ್ಪು ಬಿಳುಪಿನ ಈ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ.ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಜೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರೊಂದಿಗಿನ ತಮ್ಮ ಮುಂಬರುವ ಪಾಡ್‌ಕಾಸ್ಟ್ ಸಂಚಿಕೆಯ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇವರಿಬ್ಬರು ಆಫೀಸ್ ಕಚೇರಿಯಲ್ಲಿ ಕುಳಿತು ಸಂವಾದ ನಡೆಸುತ್ತಿರುವುದನ್ನು ಕಾಣಬಹುದು.ಸುಮಾರು 39 ಸೆಕೆಂಡುಗಳ ಈ ವಿಡಿಯೊದಲ್ಲಿ ಅವರಿಬ್ಬರು ಕಾಫಿ ಹೀರುತ್ತಾ, ನಗುತ್ತಾ ಸಂವಾದ ನಡೆಸುವುದನ್ನು ತೋರಿಸಲಾಗಿದೆ. ಈ ವಿಡಿಯೊವನ್ನು ನಿಖಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೊಗೆ “ಕ್ಯಾಪ್ಶನ್ ದಿಸ್” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ. ನಿಖಿಲ್ ಅವರು ಈ ಪೋಸ್ಟ್ ಅನ್ನು ಎಲಾನ್ ಮಸ್ಕ್ ಅವರಿಗೆ ಟ್ಯಾಗ್ ಮಾಡಿದ್ದೂ, ಇದರಲ್ಲಿ ಕಾಮತ್ ಅವರ ಮುಂಬರುವ “WTF ಈಸ್?” ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಳ್ಳುವಿಕೆಯ ಬಗ್ಗೆ ಸುಳಿವು ನೀಡಿದೆ.
