ಉದಯವಾಹಿನಿ, ಇಸ್ಲಾಮಾಬಾದ್: ಇಮ್ರಾನ್ ಖಾನ್ ( ಎಲ್ಲಿದ್ದಾರೆ? ಈ ಪ್ರಶ್ನೆ ಈಗ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಭೇಟಿ ಮಾಡಲು ಹಲವು ವಾರಗಳಿಂದ ಅವಕಾಶ ನೀಡಲಾಗಿಲ್ಲ ಎಂದು ಅವರ ಕುಟುಂಬ ಹೇಳಿಕೊಳ್ಳುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಇಮ್ರಾನ್ ಖಾನ್ ಮೃತಪಟ್ಟಿದ್ದಾರೆ ಎಂದು ಸುದ್ದಿ ಕೂಡ ಹಬ್ಬಿತ್ತು. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಜೈಲಧಿಕಾರಿಗಳು ಮಾಜಿ ಪ್ರಧಾನಿ ಆರೋಗ್ಯವಾಗಿದ್ದಾರೆ, ಇವೆಲ್ಲಾ ವದಂತಿ ಎಂದು ಹೇಳಿದ್ದರು. ಆದರೂ ಕೂಡ ಕುಟುಂಬಕ್ಕೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರಲ್ಲಿ ಒಬ್ಬರಾದ ಅಲೀಮಾ ಖಾನಮ್, ತಮ್ಮ ಕುಟುಂಬಕ್ಕೆ ಅವರನ್ನು ಭೇಟಿಯಾಗಲು ಪದೇ ಪದೇ ನಿರಾಕರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ 6-7 ತಿಂಗಳುಗಳಿಂದ, ಅವರು ಬಹಳಷ್ಟು ತೊಂದರೆ ನೀಡಿದ್ದಾರೆ. ಕೆಲವೊಮ್ಮೆ ಅವರು, ಅವರನ್ನು ತನಗೆ ಭೇಟಿ ಮಾಡಲು ಅವಕಾಶ ನೀಡುತ್ತಾರೆ, ಕೆಲವೊಮ್ಮೆ ಅವರು ನನ್ನ ಸಹೋದರಿಯರಲ್ಲಿ ಒಬ್ಬರನ್ನು ಭೇಟಿ ಮಾಡಲು ಅವಕಾಶ ನೀಡುತ್ತಾರೆ, ಕೆಲವೊಮ್ಮೆ ಅವರು ಯಾರನ್ನೂ ಭೇಟಿಯಾಗಲು ಬಿಡುವುದಿಲ್ಲ. ಹಲವು ಬಾರಿ ನಾವು ಗಂಟೆಗಟ್ಟಲೆ ಹೊರಗೆ ಕಾದಿದ್ದೇವೆ ಎಂದು ಇಮ್ರಾನ್ ಖಾನ್ ಅವರ ಸಹೋದರಿ ತಿಳಿಸಿದ್ದಾರೆ.
