ಉದಯವಾಹಿನಿ, ಕಾಂತಾರ ಸಿನಿಮಾಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ಡಿವೈನ್‌ ಸ್ಟಾರ್ ರಿಷಬ್ ಶೆಟ್ಟಿ ಎಲ್ಲೇ ಹೋದರೂ ಅದ್ಧೂರಿ ಸ್ವಾಗತ ಸಿಗುತ್ತಿದೆ. ಇತ್ತೀಚೆಗೆ ಸಿನಿಮಾದ ಯಶಸ್ಸಿನ ಯಾತ್ರೆ ಕೈಗೊಂಡಿದ್ದರು ರಿಷಬ್ ಶೆಟ್ಟಿ. ಬಳಿಕ ಟೆಂಪಲ್ ರನ್ ಹಮ್ಮಿಕೊಂಡಿದ್ದರು. ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ವೈಶಿಷ್ಟ್ಯ ಹೊಂದಿರುವ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇದೀಗ ಗೋವಾ ಫಿಲ್ಮೋತ್ಸವದಲ್ಲಿ ಪತ್ನಿ ಜೊತೆ ಭಾಗಿಯಾಗಿದ್ದಾರೆ.
ಗೋವಾದಲ್ಲಿ ನಡೆದ ಫಿಲ್ಮೋತ್ಸವದಲ್ಲಿ ರಿಷಬ್ ಶೆಟ್ಟಿ ಪತ್ನಿ ಸಮೇತ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಗೋವಾ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಿಷಬ್ ಹಾಗೂ ರಿಷಬ್ ಪತ್ನಿಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಈ ಹಿಂದೆ ಯಶ್ ಕೂಡ ಗೋವಾದ ಸಿಎಂ ಭೇಟಿ ಮಾಡಿ, ಅಭಿನಂದನೆ ಸ್ವೀಕರಿಸಿದ್ದರು.
ಕಾಂತಾರ ಯಶಸ್ಸಿನ ನಂತರ ರಿಷಬ್‌ಗೆ ದೇಶದಾದ್ಯಂತ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಪರರಾಜ್ಯದ ನಂಟು ಕೂಡಾ ವೃದ್ಧಿಸುತ್ತಿದೆ. ಕಾಂತಾರ ಚಾಪ್ಟರ್-1 ಸಿನಿಮಾ ಬಳಿಕ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ. ಈ ಸಿನಿಮಾದ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕರು ಪಕ್ಕದ ತೆಲುಗು ನಾಡಿನವರು. ಹಿಂದಿ ಬೆಲ್ಟ್ನಲ್ಲೂ ರಿಷಬ್ ಕೀರ್ತಿ ಪತಾಕೆ ಹಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!