ಉದಯವಾಹಿನಿ, ಬಿಗ್‌ಬಾಸ್ ಕನ್ನಡ 12ರ ಈ ವಾರದ ಟಾಸ್ಕ್‌ನಲ್ಲಿ ಗಿಲ್ಲಿ ,ಮಾಜಿ ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿಯೇ ನಡೆದಿದೆ. ಇಂದಿನ ಪಂಚಾಯಿತಿಯಲ್ಲಿ ಚರ್ಚೆಯ ಕಿಚ್ಚು ಕೂಡ ಜೋರಾಗಿಯೇ ಇರಲಿದ್ದು, ಗಿಲ್ಲಿಗೆ ಕಾಮಿಡಿಗೆ ಸುದೀಪ್ ಬ್ರೇಕ್ ಹಾಕ್ತಾರಾ ಎನ್ನುವಂತಾಗಿದೆ. ಹೌದು, ಇಂದಿನ ಕಿಚ್ಚನ ಪಂಚಾಯಿತಿಯ ಸಣ್ಣ ಝಲಕ್‌ವೊಂದು ಸದ್ಯ ರಿವೀಲ್ ಮಾಡಿದ್ದು, ಸುದೀಪ್ ಗಿಲ್ಲಿಗೆ ಸರಿಯಾಗಿ ಕ್ಲಾಸ್ ಮಾಡ್ತಾರೆ ಎನ್ನುವಂತೆ ಕಂಡುಬಂದಿದೆ. ಪ್ರೋಮೋದಲ್ಲಿ ಮೊದಲಿಗೆ ಸುದೀಪ್ ಗಿಲ್ಲಿಗೆ, ನಿಮಗೆ ಯಾವುದಾದರೂ ಹೊಟೇಲ್‌ಗೆ ಹೋದಾಗ ಸಪ್ಲೈಯರ್ ಇದೇ ರೀತಿ ಮಾಡಿದ್ರೆ ನಿಮಗೆ ಓಕೆ ಆಗಿರೋದಾ ಎಂದು ಕೇಳ್ತಾರೆ. ಸುದೀಪ್ ಮಾತಿಗೆ ಮನೆಯ ಸದಸ್ಯರಾದ ರಜತ್, ತ್ರಿವಿಕ್ರಮ್, ಸ್ಪಂದನಾ, ಜಾಹ್ನವಿ ದನಿಗೂಡಿಸಿದ್ದಾರೆ.
ಗಿಲ್ಲಿ ಮಾಡಿದ ತಪ್ಪಿಗೆ ಮನೆಯ ಸದ್ಯಸರ ಮೇಲೆ ಎಫೆಕ್ಟ್‌ ಆಯ್ತು. ಗಿಲ್ಲಿಯ ಆಟ…. ಆಟದ ರೀತಿ ತೆಗೆದುಕೊಳ್ಳೋಕೆ ಆಗ್ತಿರಲಿಲ್ಲ. ಬೇರೆಯವರ ಮನಸ್ಸಿಗೆ ನೋವು ಆಗ್ತಿದೆ ಅನ್ನೋದು ಇಷ್ಟ ಆಗ್ಲಿಲ್ಲ. ಪುಕ್ಸಟ್ಟೆ ತಿನ್ನೋಕೆ ಬಂದಿದ್ದೀರಾ ಅಂತಾನೆ, ಮಂಜು ಅವರ ಬಗ್ಗೆ ಮಾತನಾಡುತ್ತಾನೆ ಎಂದು ಗಿಲ್ಲಿ ವಿರುದ್ಧವಾಗಿ ಕಂಪ್ಲೇಟ್ ಮಾಡಿದ್ದಾರೆ.
ಇನ್ನೂ ಮನೆಗೆ ಮಾಜಿ ಸ್ಪರ್ಧಿಗಳು ಬಂದಾಗಿನಿಂದ ಒಂದಿಲ್ಲೊಂದು ಜಗಳ ನಡೆಯುತ್ತಲೇ ಇವೆ. ಪ್ರಾರಂಭದಲ್ಲೇ ಮಂಜು ಮದುವೆ ವಿಷಯಕ್ಕೆ, ರಜತ್ ಜೊತೆ ಊಟದ ವಿಷಯಕ್ಕೆ ಕಿಟ್ಲೆ ಮಾಡುತ್ತಾ, ಟಾಂಗ್ ಕೊಡುತ್ತಾ, ಟ್ರೀಗರ್ ಮಾಡುತ್ತಲೇ ಬಂದಿದ್ದಾರೆ. ಗಿಲ್ಲಿ ಹರ್ಟ್ ಆಗೋ ಥರ ತಮಾಷೆ ಮಾಡ್ತಾರೆ ಅನ್ನೋದು ಮನೆಮಂದಿಯ ಆರೋಪ. ಈ ಬಗ್ಗೆ ಎಷ್ಟೋ ಸಲ ಕಿಚ್ಚನ ಬಳಿ ಸ್ಪರ್ಧಿಗಳು ದೂರಿದ್ದಾರೆ. ಈಗ ಗಿಲ್ಲಿಯ ತಮಾಷೆ ಅತಿಥಿಗಳನ್ನೂ ಸಿಟ್ಟಾಗುವಂತೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!