ಉದಯವಾಹಿನಿ, ನವದೆಹಲಿ: ವಿದರ್ಭ ವಿರುದ್ಧ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 49 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದಾರೆ. ಲಖನೌ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಅಂಡರ್‌-19 ತಂಡದ ನಾಯಕ ಆಯುಷ್‌ ಮ್ಹಾತ್ರೆ, ತಾವು ಆಡಿದ 53 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಹಲವು ಸಿಕ್ಸರ್‌ಗಳ ಮೂಲಕ 110 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಮುಂಬೈ ತಂಡದ 7 ವಿಕೆಟ್‌ ಗೆಲುವಿಗೆ ನೆರವು ನೀಡಿದ್ದರು. ಇವರ ಶತಕದ ಮೂಲಕ ಮುಂಬೈ 193 ರನ್‌ಗಳನ್ನು ಸುಲಭವಾಗಿ ಚೇಸ್‌ ಮಾಡಿತ್ತು.
18 ವರ್ಷ, 135 ದಿನಗಳ ವಯಸ್ಸಿನ ಆಯುಷ್‌ ಮ್ಹಾತ್ರೆ ಅವರು ಪ್ರಥಮ ದರ್ಜೆ ಕ್ರಿಕೆಟ್‌, ಲಿಸ್ಟ್‌ ಎ ಹಾಗೂ ಟಿ20 ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಅವರು 19 ವರ್ಷ, 339 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ತಮ್ಮ 20ನೇ ವಯಸ್ಸಿನಲ್ಲಿ ಉನ್ಮುಕ್ತ್ ಚಾಂದ್‌ ಈ ದಾಖಲೆ ಬರೆದಿದ್ದರು. ಆಯುಷ್‌ ಅವರ ಪಾಲಿಗೆ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಇದಾಗಿದೆ. ವೈಭವ್‌ ಸೂರ್ಯವಂಶಿ ಹಾಗೂ ವಿಜಯ್‌ ಝೋಲ್‌ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೂರನೇ ಅತ್ಯಂತ ಕಿರಿಯ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!