ಉದಯವಾಹಿನಿ, ಮುಂಬೈ: ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಘಾತ ಅನುಭವಿಸಿರುವುದು ಹಿರಿಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಟೀಮ್ ಇಂಡಿಯಾ ಬ್ಯಾಟರ್‌ಗಳ ಕಳಪೆ ಪ್ರದರ್ಶನದ ಕುರಿತು ಹಲವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಭಾರತ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ತಂಡ ಕಳೆದ 12 ತಿಂಗಳ ಅಂತರದಲ್ಲಿ ತವರು ನೆಲದಲ್ಲಿ ಆಡಿರುವ ಎರಡು ಟೆಸ್ಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಜುಗರ ಅನುಭವಿಸಿದೆ. 1984ರ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿ ತವರಿನಲ್ಲಿ ಸತತ ಎರಡು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್‌ನಲ್ಲಿಸೋತಿದೆ. ಇತ್ತೀಚಿಗೆ ಟೆಸ್ಟ್ ತಂಡದ ಗೆಲುವಿನ ಫಲಿತಾಂಶ ಕುಸಿದ ಹಿನ್ನಲೆ ಅಸಮಾಧಾನ ಸ್ಪೋಟಗೊಂಡಿದೆ. ಸರಣಿಯುದ್ದಕ್ಕೂ ಭಾರತ ತಂಡ ದಕ್ಷಿಣ ಆಫ್ರಿಕಾ ಬೌಲರ್‌ಗಳ ವಿರುದ್ಧ ನಿರಂತರವಾಗಿ ವೈಫಲ್ಯ ಅನುಭವಿಸಿತು. ಈ ಹಿನ್ನೆಲೆ ಸ್ಪಿನ್ ವಿರುದ್ಧದ ಪ್ರದರ್ಶನ ಸುಧಾರಿಸಲು ಆಟಗಾರರು ದೇಶಿ ಕ್ರಿಕೆಟ್ ಏಕೆ ಆಡುತ್ತಿಲ್ಲ ಎಂದು ಕಪಿಲ್ ದೇವ್ ಪ್ರಶ್ನಿಸಿದ್ದಾರೆ.
ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, “ಅವರು ವೈಯಕ್ತಿಕ ಶೈಲಿ, ವಿವಿಧ ಪಿಚ್‌ಗಳಲ್ಲಿ ಉತ್ತಮ ದೇಶಿ ಕ್ರಿಕೆಟ್ ಆಡದೇ ಇರುವುದರಿಂದ ಇದು ಸಾಧ್ಯವಾಯಿತು. ಇಂದಿನ ಎಷ್ಟು ಆಟಗಾರರು ದೇಶಿ ಕ್ರಿಕೆಟ್ ಆಡುತ್ತಿದ್ದಾರೆಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ನೀವು ದೇಶಿ ಕ್ರಿಕೆಟ್ ಆಡದಿದ್ದರೆ ಮತ್ತು ಗುಣಮಟ್ಟದ ಬೌಲರ್‌ಗಳನ್ನು ಎದುರಿಸದಿದ್ದರೆ, ನೀವು ಕಷ್ಟಪಡಬೇಕಾಗುತ್ತದೆ,” ಎಂದು ಕಪಿಲ್ ದೇವ್ ಎಚ್ಚರಿಕೆ ನೀಡಿದ್ದಾರೆ.
