ಉದಯವಾಹಿನಿ, ಚಳಿಗಾಲದ ಸಮಯದಲ್ಲಿ ಬಹುತೇಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಶೀತ ಹವಾಮಾನ, ಕಡಿಮೆ ಸೂರ್ಯನ ಬೆಳಕು ಹಾಗೂ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ವೈರಸ್‌ಗಳನ್ನು ಸುಲಭವಾಗಿ ಹರಡುವಂತೆ ಮಾಡುತ್ತದೆ. ಶೀತ ಹಾಗೂ ಜ್ವರದಂತಹ ಸೋಂಕುಗಳು ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.ಈ ಸಮಯದಲ್ಲಿ ಕೆಲವು ಸೂಪ್‌ಗಳನ್ನು ದೇಹಕ್ಕೆ ವರದಾನವಾಗಿವೆ. ಈ ಸೂಪ್​ಗಳು ರುಚಿಕರವಾಗಿರುವುದಲ್ಲದೆ, ನೈಸರ್ಗಿಕ ಔಷಧದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಕೆಲವು ಸೂಪ್‌ಗಳು ಚಳಿಗಾಲದಲ್ಲಿ ದೇಹಕ್ಕೆ ಅಮೃತಕ್ಕೆ ಸಮಾನವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.
ಚಳಿಗಾಲದಲ್ಲಿ ಕಾಡುವಂತಹ ಶೀತ ಹಾಗೂ ಕೆಮ್ಮಿನ ಸಮಸ್ಯೆಗಳಿಂದ ಬೇಗನೆ ಮುಕ್ತಿ ಪಡೆಯಲು ಬಯಸಿದರೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಸೂಪ್‌ಗಳನ್ನು ಕುಡಿಯಲು ಪ್ರಯತ್ನಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಈ ಸೂಪರ್ ಸೂಪ್‌ಗಳು ಯಾವುವು ಎಂಬುದನ್ನು ತಿಳಿಯೋಣ.ಬೇಳೆ ಕಾಳುಗಳ ಸೂಪ್: ಬೇಳೆ ಕಾಳುಗಳ ಸೂಪ್ ಶೀತವನ್ನು ಹೋಗಲಾಡಿಸುವ ಮತ್ತು ದೇಹದ ಚಟುವಟಿಕೆಯನ್ನು ಹೆಚ್ಚಿಸುವ ಸೂಪ್‌ಗಳಲ್ಲಿ ಒಂದಾಗಿದೆ. ಅಂದರೆ ನೀವು ನಿಮ್ಮ ನೆಚ್ಚಿನ ಮೂರು ದ್ವಿದಳ ಧಾನ್ಯಗಳನ್ನು ಆರಿಸುವ ಮೂಲಕ ಇದನ್ನು ಮಾಡಬಹುದು. ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸುವುದರಿಂದ ರುಚಿಯೂ ಹೆಚ್ಚಾಗುತ್ತದೆ.ರಕ್ತ ಪರಿಚಲನೆ ಸುಧಾರಿಸುತ್ತದೆ. ಇವುಗಳಲ್ಲಿರುವ ಕಬ್ಬಿಣ ಮತ್ತು ಫೋಲೇಟ್ ರಕ್ತಹೀನತೆಯನ್ನು ತಡೆಯುತ್ತದೆ. ಇವುಗಳಲ್ಲಿರುವ ಫೈಟೊಈಸ್ಟ್ರೊಜೆನ್‌ಗಳು ಪಿಸಿಓಎಸ್ ಮತ್ತು ಋತುಬಂಧದ ಲಕ್ಷಣಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಈ ಸೂಪ್ ಹಾಲುಣಿಸುವ ತಾಯಂದಿರಿಗೆ ಸೂಪರ್‌ಫುಡ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಸತು, ವಿಟಮಿನ್ ಬಿ6 ಮತ್ತು ಉತ್ಕರ್ಷಣ ನಿರೋಧಕಗಳು ಶೀತ ಹಾಗೂ ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

Leave a Reply

Your email address will not be published. Required fields are marked *

error: Content is protected !!