ಉದಯವಾಹಿನಿ, ಅನೇಕರಿಗೆ ಪನೀರ್​ನಿಂದ ಮಾಡಿದ ಅಡುಗೆಗಳೆಂದರೆ ಬಲು ಇಷ್ಟವಾಗುತ್ತದೆ. ಪರೋಟ, ಚಪಾತಿ ಹಾಗೂ ರೊಟ್ಟಿಯಿಂದ ಹಿಡಿದು ಬಿರಿಯಾನಿಯವರೆಗೆ ಪನೀರ್​ನಿಂದ ಮಾಡಿದ ಕರಿಯ ಜೊತೆಗೆ ಸವಿಯಬಹುದು. ಹೀಗೆ ಅನೇಕರು ಪನೀರ್​ನೊಂದಿಗೆ ಮಸಾಲಾ ಕರಿ, ಕಾಜು ಪನೀರ್ ಹಾಗೂ ಶಾಹಿ ಪನೀರ್​ನಂತಹ ವಿವಿಧ ರೆಸಿಪಿಗಳನ್ನು ತಯಾರಿಸಿ, ಸವಿಯುತ್ತಾರೆ.ಈ ರೀತಿಯ ಖಾದ್ಯಗಳನ್ನು ಹೊರತುಪಡಿಸಿ ಹೊಸ ರೀತಿಯ ಪನೀರ್ ಕರಿಯನ್ನು ಮಾಡೋಣ. ಅದುವೇ ರುಚಿಯಾದ ಗ್ರೀನ್ ಪನೀರ್ ಕರಿ. ಸೊಪ್ಪಿನಿಂದ ತಯಾರಿಸಲಾದ ಈ ಖಾದ್ಯವನ್ನು ಪಾಲಕ್ ಪನೀರ್ ಎಂದು ಹೇಳಲಾಗುತ್ತದೆ. ಈ ಕರಿಯು ರುಚಿಯಾಗಿದ್ದು, ಇದನ್ನು ರೊಟ್ಟಿ, ಚಪಾತಿ ಹಾಗೂ ರೈಸ್​ನೊಂದಿಗೆ ತಿನ್ನಬಹುದು. ಇದನ್ನು ನಾವು ನೂತನ ಶೈಲಿಯಲ್ಲಿ ತಯಾರಿಸಿದರೆ ಎಲ್ಲರೂ ಇಷ್ಟಪಟ್ಟು ಇನ್ನೇರೆಡು ತುತ್ತು ಹೆಚ್ಚು ಸೇವಿಸುತ್ತಾರೆ. ಇದೀಗ ರುಚಿಯಾದ ಪಾಲಕ್ ಪನೀರ್ ಕರಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಪಾಲಕ್ ಪನೀರ್​ ಕರಿಗೆ ಬೇಕಾಗುವ ಸಾಮಗ್ರಿಗಳೇನು?: ಪನೀರ್ ಪೀಸ್​ಗಳು – ಒಂದು ದೊಡ್ಡ ಕಪ್, ಪಾಲಕ್ – ಒಂದು ಕಟ್, ಪುದೀನ – ಒಂದು ಕಟ್
ಕೊತ್ತಂಬರಿ – ಒಂದು ಕಟ್​ , ಹಸಿ ಮೆಣಸಿನಕಾಯಿಗಳು – ನಾಲ್ಕರಿಂದ ಐದು, ಜೀರಿಗೆ – ಒಂದು ಟೀಸ್ಪೂನ್, ಗೋಡಂಬಿ – ಐದು, ಈರುಳ್ಳಿ ತುಂಡುಗಳು – ಒಂದು ದೊಡ್ಡ ಕಪ್, ಟೊಮೆಟೊ ಪೇಸ್ಟ್ – ಅರ್ಧ ಕಪ್ , ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಒಂದು ಟೀಸ್ಪೂನ್, ಅರಿಶಿನ – ಕಾಲು ಟೀಸ್ಪೂನ್ ಖಾರದ ಪುಡಿ – ಒಂದು ಟೀಸ್ಪೂನ್, ಧನಿಯಾ ಪುಡಿ – ಒಂದು ಟೀಸ್ಪೂನ್, ಗರಂ ಮಸಾಲ – ಅರ್ಧ ಟೀಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು ಎಣ್ಣೆ – ಕಾಲು ಕಪ್, ತುಪ್ಪ – ಒಂದು ಟೀಸ್ಪೂನ್ ಖತ್​ ಟೇಸ್ಟಿಯಾದ ಪಾಲಕ್ ಪನೀರ್​ ಕರಿ ಸಿದ್ಧಪಡಿಸಲು, ಮೊದಲು ಒಂದು ಸಣ್ಣ ಬಟ್ಟಲಿನಲ್ಲಿ ಕಾಲು ಕಪ್ ಹಾಲು ತೆಗೆದುಕೊಂಡು ಅದಕ್ಕೆ ಗೋಡಂಬಿ ಹಾಕಿ ನೆನೆಸಿಡಿ. ಇವುಗಳನ್ನು ನೆನೆಸುವ ಮೊದಲು ಪಾಲಕ್, ಪುದೀನ ಹಾಗೂ ಕೊತ್ತಂಬರಿ ಸೊಪ್ಪನ್ನು ತೊಳೆದು ಮಿಕ್ಸಿ ಜಾರ್‌ಗೆ ಹಾಕಿ.

Leave a Reply

Your email address will not be published. Required fields are marked *

error: Content is protected !!