ಉದಯವಾಹಿನಿ, ಲಖನೌ : ಚಿರತೆ ಹಿಡಿಯಲು ಬೋನಿನಲ್ಲಿ ಇರಿಸಲಾಗಿದ್ದ ಜೀವಂತ ಮೇಕೆಯನ್ನು ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಅದರಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಎರಡು ಬೋನುಗಳನ್ನು ಇರಿಸಿದ್ದರು. ಕಾಡು ಪ್ರಾಣಿಯನ್ನು ಆಕರ್ಷಿಸಲು ಜೀವಂತ ಮೇಕೆಗಳನ್ನು ಒಳಗೆ ಕಟ್ಟಲಾಗಿತ್ತು. ಆದರೆ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಮೇಕೆಯನ್ನು ನೋಡಿ, ಅದನ್ನು ಹಿಡಿಯುವ ಪ್ರಯತ್ನ ಮಾಡಲು ಹೋಗಿ ಬೋನಿನೊಳಗೆ ಬಂಧಿಯಾಗಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ.
ಮರುದಿನ ಬೆಳಗ್ಗೆ ಗ್ರಾಮಸ್ಥರು ಚಿರತೆಯ ಬದಲು ಬೋನಿನೊಳಗೆ ಸಿಲುಕಿರುವ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಘಟನೆಯ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದರ ವಿಡಿಯೊ ವೈರಲ್ ಆಗಿದೆ. ಪ್ರದೀಪ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ತಡರಾತ್ರಿ ಬೋನಿನೊಳಗೆ ಮೇಕೆಯನ್ನು ನೋಡಿದ್ದಾನೆ. ಆದರೆ ಅದು ಚಿರತೆಗೆ ಹೆಣೆಯಲಾದ ಬಲೆ ಎಂದು ಅವನಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಪ್ರದೀಪ್ ಜೀವಂತ ಮೇಕೆಯನ್ನು ಕದಿಯಲು ಪ್ರಯತ್ನಿಸಿದ್ದ. ಆದರೆ ಹೊರಬರಲಾರದೆ ಮೇಕೆಯೊಂದಿಗೆ ಪ್ರದೀಪ್ ಇಡೀ ರಾತ್ರಿ ಒಳಗೆ ಸಿಲುಕಿಕೊಂಡಿದ್ದನು.

Leave a Reply

Your email address will not be published. Required fields are marked *

error: Content is protected !!