ಉದಯವಾಹಿನಿ, ಅಡುಗೆ ಮಾಡುವುದು ಕೂಡ ಒಂದು ಕಲೆಯಾಗಿದೆ. ಈ ಕಲೆ ಎಲ್ಲರಿಗೂ ಅಷ್ಟು ಸರಳವಾಗಿ ಕರಗತವಾಗುವುದಿಲ್ಲ. ಫಟಾಫಟ್ ಅಂತ ಅಡುಗೆ ಮಾಡುವುದು ನೀರು ಕುಡಿದಷ್ಟು ಸಲಭವಲ್ಲ. ಅಡುಗೆ ಮಾಡಲು ಅನುಭವ, ಜಾಣ್ಮೆ, ಕೆಲವೊಂದು ತಂತ್ರ ಹಾಗೂ ಸ್ಮಾರ್ಟ್ನೆಸ್ ಬೇಕಾಗುತ್ತದೆ.ಮುಖ್ಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಿರುವುದು ಏನೆಂದ್ರೆ, ಅಡುಗೆ ಸಿದ್ಧಪಡಿಸುವ ಮೊದಲು ಸರಿಯಾಗಿ ತರಕಾರಿ ಕಟ್ ಮಾಡುವುದರಿಂದ ಹಿಡಿದು, ತಯಾರು ಮಾಡಿದ ಸಾಂಬರ್‌ಗೆ ಉಪ್ಪು- ಹುಳಿ- ಖಾರ ಕಡಿಮೆ ಇಲ್ಲವೇ ಜಾಸ್ತಿ ಆಗದಂತೆ ಗಮನಹರಿಸಬೇಕಾಗುತ್ತದೆ. ಜೊತೆಗೆ ಬೇಗನೆ ಅಡುಗೆ ಕೆಲಸ ಮುಗಿಸುವ ಮೂಲಕ ಮನೆಯವರೆಲ್ಲರಿಂದಲೂ ಸೈ ಎನಿಸಿಕೊಳ್ಳಬೇಕಾಗುತ್ತದೆ. ಮನೆಯಲ್ಲಿ ರುಚಿಕರ ಹಾಗೂ ತ್ವರಿತವಾದ ಅಡುಗೆಗಳನ್ನು ಸಿದ್ಧಪಡಿಸಲು ನಿಮಗಾಗಿ 15 ಸೂಪರ್ ಟಿಪ್ಸ್ ಅನ್ನು ನಾವು ತಂದಿದ್ದೇವೆ. 1. ಅಡುಗೆ ಎಣ್ಣೆಯನ್ನು ಅಂಗೈಗೆ ಹಚ್ಚಿ ಮೀನನ್ನು ಶುಚಿಗೊಳಿಸಿದರೆ ಕೈಗೆ ಮೀನು ಜಿಡ್ಡು ಮತ್ತು ವಾಸನೆ ಅಂಟುವುದಿಲ್ಲ.
2. ಆಲೂಗಡ್ಡೆಯನ್ನು ಕುದಿಸುವ ಮುನ್ನ ಗೆಡ್ಡೆಯ ಸುತ್ತಲೂ ಚರ್ಮವನ್ನು ಲಘುವಾಗಿ ಉಜ್ಜಿದ ಬಳಿಕ ಕುದಿಸಿ. ಹೀಗೆ ಮಾಡಿದರೆ ಚರ್ಮ ಸುಲಭವಾಗಿ ಉದುರುತ್ತದೆ.3. ಒಂದು ದೊಡ್ಡ ಮಿಕ್ಸರ್ ಜಾರ್‌ನಲ್ಲಿ 2 ಕಪ್ ಗೋಧಿ ಹಿಟ್ಟು, ಅಗತ್ಯ ಪ್ರಮಾಣದ ಉಪ್ಪು, 1 ಚಮಚ ಎಣ್ಣೆ ಮತ್ತು 1 ಕಪ್ ನೀರನ್ನು ಮಿಶ್ರಣ ಮಾಡಿ ಮತ್ತು 30 ಸೆಕೆಂಡುಗಳ ಕಾಲ ಚಪಾತಿ ಹಿಟ್ಟಿನ್ನು ನಾದಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಪ್ಲೇಟ್‌ಗೆ ವರ್ಗಾಯಿಸಿ, 1 ನಿಮಿಷ ಕೈಗಳಿಂದ ಬೆರೆಸಿಕೊಳ್ಳಿ ಮತ್ತು ಚಪಾತಿ ಹಿಟ್ಟು ಸಿದ್ಧವಾಗಿದೆ.4. ಅಡುಗೆಗೆ ಹುಣಸೆ ಹಣ್ಣನ್ನು ನೆನೆಯಲು ಮರೆತರೆ ಅದಕ್ಕೆ ಬೇಕಾದ ಹುಣಸೆ ಹಣ್ಣನ್ನು ಮಿಕ್ಸಿ ಜಾರ್‌ನಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ, ಈ ಮಿಶ್ರಣಕ್ಕೆ ಅಗತ್ಯ ಪ್ರಮಾಣದ ನೀರನ್ನು ಸುರಿಯಿರಿ ಹಾಗೂ ಅದನ್ನು ರುಬ್ಬಕೊಂಡು ಬಳಿಕ ಫಿಲ್ಟರ್ ಮಾಡಿ. 5. ರಾತ್ರಿ ಮಾಡಿದ ತರಕಾರಿ ಪಲ್ಯಗಳು ಉಳಿದಿದ್ದರೆ ಇದನ್ನು ಸ್ಟಫ್ಡ್ ಆಗಿ ಬಳಕೆ ಮಾಡಬಹುದು. ಉಪಹಾರಕ್ಕೆ ಚಪಾತಿ ಹಿಟ್ಟಿನಲ್ಲಿ ಹಾಕಿ ಸ್ಟಫ್ಡ್ ಚಪಾತಿಗಳನ್ನು ಮಾಡಬಹುದು.
6. ರಾತ್ರಿ ಮಲಗುವ ಮುನ್ನ ಮರು ದಿನದ ಊಟಕ್ಕೆ ಬೇಕಾಗುವ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ಹೊರತೆಗೆದು ಇಡಬೇಕು. ಮರುದಿನ ಬೆಳಗ್ಗೆ ಸ್ಪಷ್ಟವಾಗಿ ಬೇಗ ಬೇಗ ಅಡುಗೆ ಮಾಡಿ ಮುಗಿಸಬಹುದು.7. ಬೇಳೆಗೆ ಬೇಕಾಗುವಷ್ಟು ನೀರನ್ನು ಮಾತ್ರ ಸುರಿಯಿರಿ, ಒಂದು ಚಮಚ ಎಣ್ಣೆಯನ್ನು ಸೇರಿಸಿ. ಹಾಗೂ ಕುಕ್ಕರ್ ಅನ್ನು 5 ನಿಮಿಷಗಳ ಕಾಲ ಮುಚ್ಚಳ ಮುಚ್ಚದೇ ಕುದಿಸಿ. ನಂತರ ಇದನ್ನು ಮುಚ್ಚಳ ಮುಚ್ಚಿ ಸೀಟಿ ಬಂದಾಗ ನೀರು ಹೊರಗೆ ಬರುವುದಿಲ್ಲ.
8. ತೆಂಗಿನಕಾಯಿ ರುಬ್ಬುವಾಗ, ಸ್ವಲ್ಪ ಶುಂಠಿಯನ್ನು ಸೇರಿಸಿ ತೊಳೆಯುವುದು ಟೇಸ್ಟಿ ಹಾಗೂ ಪರಿಮಳಯುಕ್ತವಾಗಿರುತ್ತದೆ. 9. ತುಪ್ಪದ ಡಬ್ಬಿಯಲ್ಲಿ ಸ್ವಲ್ಪ ಬೆಲ್ಲ ಹಾಕಿದರೆ ತುಪ್ಪವು ಸುವಾಸನೆ ಬರುತ್ತದೆ. ಅದೇ ರೀತಿ ಯಾವುದೇ ಚಟ್ನಿಯಲ್ಲಿ ಸ್ವಲ್ಪ ಬೆಳ್ಳುಳ್ಳಿ ಹಾಕಿದರೆ ಸುವಾಸನೆ ಮತ್ತು ಪರಿಮಳ ಬರುತ್ತದೆ.
