ಉದಯವಾಹಿನಿ,
ತಾಲ್ಲೂಕಿನ ಬರದಾಪೂರ ಗ್ರಾಮದಲ್ಲಿ ಶುಕ್ರವಾರ ಲಕ್ಷ್ಮಿದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.
ದೇವಗಿರಿಯ ಮುಂಗಿ ಮಹಾರಾಜ್ ಅವರ ನೇತೃತ್ವದಲ್ಲಿ ೫೧ ದಂಪತಿಗಳಿಂದ ಮಹಾಚಂಡಿ ಯಜ್ಞ ಹೋಮ ಹವನ ಪೂಜೆ ನಡೆಸುವ ಮೂಲಕ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಿದರು.
ಮುಂಗಿ ಮಹಾರಾಜ್ ಪ್ರವಚನ ನೀಡಿ, ಸಮಾಜದಲ್ಲಿ ಶಾಂತಿ ನೆಲೆಸುವ ಮೂಲಕ ರ‍್ವರಲ್ಲಿ ಅಹಂ ಎನ್ನುವ ವೈರಿ ತೋಲಗಾ ಸಹೋದರತೆಯ ಮನೋಭಾವ ಬೆಳೆಯಬೇಕು ಎಂದು ಉಪದೇಶ ಸಾರಿದರು. ಗ್ರಾಮದಲ್ಲಿ ಮಹಾಚಂಡಿ ಲಕ್ಷ್ಮೀಮಾತ ಭವ್ಯ ಮೆರವಣಿಗೆ ಮಾಡಿದರು.
ವಾಮನರಾವ ಪಾಟೀಲ್, ಜೈಪಾಲ್ ರೆಡ್ಡಿ , ನಜೀರ್ ಅಹ್ಮದ್, ಸುಭಾಶ್ ರೆಡ್ಡಿ, ಸಂಜು ಗೌಡ, ಭಾಸ್ಕರ್ ಪಾಟೀಲ್, ಸುನಿಲ್ ಪಾಟೀಲ್, ಸಿದ್ದಾರೆಡ್ಡಿ, ರತಿಕಾಂತ ಅಡಸಾರೆ, ಭೋಜರೆಡ್ಡಿ , ಬಾಬು ಗೌಡ, ವಿಷ್ಣು ಪಟೇಲ್, ಪಂಡರಿನಾಥ ಎಸ್ಕೆ, ವಿನಯ್ ವಿಷ್ಣುಗೊಂಡ, ದತ್ತಾತ್ರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
