ಉದಯವಾಹಿನಿ, ನಾಗಮಂಗಲ: ನಿನ್ನೊಳಗಿರುವ ಜ್ಞಾನ ನಿನ್ನನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ ಶೈಕ್ಷಣಿಕ ಸದವಕಾಶಗಳಿಂದಸಾಧ್ಯವಾದಷ್ಟುಗಳಿಸಿ, ಜ್ಞಾನದ ಪ್ರಬುದ್ಧತೆಯನ್ನು ಸಾಧಿಸಿ ಎಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ.ಎ.ಟಿ ಶಿವರಾಮು ಅಭಿಪ್ರಾಯ ಪಟ್ಟರು.
ಅವರಿಂದು ಬಿಜಿ ನಗರದ ಬಿಜಿಎಸ್ ಪಿಯು ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಸ್ಮರಣ ಶಕ್ತಿ ವೃದ್ಧಿ ಹಾಗೂ ಜೀವನ ಕೌಶಲ್ಯಗಳು” ಕುರಿತ ೧೦ ದಿನಗಳ ಕರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪದವಿ ಪೂರ್ವಶಿಕ್ಷಣ ಶಿಕ್ಷಣವು ಉನ್ನತ ಶಿಕ್ಷಣದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಂತವು ಸರಿಯಾದ ಸಂಕಲ್ಪ ಶಕ್ತಿಯಿಂದ ಶ್ರೇಷ್ಠ ಗುರಿಯನ್ನು ನಿರ್ವಹಿಸುವ ಹಾಗೂ ಸಾಧನೆಯ ಹಾದಿಯಲ್ಲಿ ಕ್ರಮಿಸಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ನಿರ್ಣಾಯಕ ಘಟ್ಟವಾಗಿದೆ. ಶಿಕ್ಷಣಕ್ಕೆ ಶಕ್ತಿ ತುಂಬುವ ಪ್ರತಿಯೊಂದು ಕರ‍್ಯಾಗಾರದ ಉಪಯೋಗದಿಂದ ವ್ಯಾಸಂಗಿಕ ತಂತ್ರಗಾರಿಕೆ ಮತ್ತು ಜೀವನ ಕೌಶಲ್ಯಗಳನ್ನು ರೂಢಿಸಿಕೊಂಡು ಯಶಸ್ವಿ ಸಾಧಕರಾಗಿ ಎಂದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಟಿ.ಎನ್ ಶಿಲ್ಪಾ ಪ್ರಾಸ್ತಾವಿಕ ನುಡಿಯನ್ನಾಡಿದರು.ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ವಿದ್ಯರ‍್ಥಿಗಳನ್ನು ಕುರಿತು ಮಾತನಾಡಿದರು. ಮಾನವ ಸಂಪನ್ಮೂಲ ಕ್ಷೇತ್ರದ ಅಂತರ ರಾಷ್ಟ್ರೀಯ ತರಬೇತುದಾರ ಆರ್ ಸತೀಶ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ೧೦ ದಿನಗಳ ಈ ಕರ‍್ಯಾಗಾರವನ್ನು ಲವಲವಿಕೆಯಿಂದ ನಡೆಸಿಕೊಡುತ್ತಿದ್ದಾರೆ. ಪ್ರತಿದಿನ ಎರಡು ತಂಡಗಳಲ್ಲಿ ೩೦೦ ಕ್ಕೂ ಹೆಚ್ಚು ವಿದ್ಯರ‍್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಸಮಾರಂಭದಲ್ಲಿ ಉಪನ್ಯಾಸಕರಾದ ಎಂ.ಆರ್ ವೇದಮರ‍್ತಿ, ಎನ್.ಎಸ್ ಚಂದನ್, ಭವ್ಯಶ್ರೀ ಎಲ್ ಕೆ, ಮೀನಾಕ್ಷಿ ಕೆ, ಚಿಕ್ಕಲಿಂಗಪ್ಪ, ರಂಗನಾಥ್ ಕೆ. ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!