ಉದಯವಾಹಿನಿ,
ಪಟ್ಟಣದ ಆರಾಧ್ಯ ದೇವತೆ ಶ್ರೀಮಹಾಲಕ್ಷ್ಮಿ ದೇವಿ (ಕಲ್ಕತ್ತಾದೇವಿ) ಪರ್ವ ವಿಜೃಂಭಣೆಯಿಂದ ಜರುಗಿತು.
ದೇವಿದರ್ಶನ ಪಡೆದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಜೇರ‍್ಗಿ ಹಿರೇಗೌಡ್ರು ಮನೆತನದ ಹೊಲ ಒಂದರಲ್ಲಿರುವ ಶ್ರೀ ಕಲ್ಕತ್ತಾ ದೇವಿ ಮಂದಿರದಲ್ಲಿ ಆಷಾಢ ಮಾಸದ ಕೊನೆ ಶುಕ್ರವಾರದಂದು ವಿಶೇಷ ಪೂಜೆ ಹೂವಿನ ಅಲಂಕಾರ ಅಭಿಷೇಕ ಜರುಗಿತು.
ಏಳೂರು ಸೀಮೆಯ ಭಕ್ತರು ಆಗಮಿಸಿ ಹಿರೇಗೌಡರ ಹೊಲದಲ್ಲಿರುವ ಕಲ್ಕತ್ತಾ ದೇವಿಗೆ ಕಾಯಿ ರ‍್ಪೂರ ನೈವೇದ್ಯ ಸರ‍್ಪಣೆ ಮಾಡಿ ತಾವು ತಂದಂತ ಪ್ರಸಾದವನ್ನು ತಾಯಿಯ ತಳದಲ್ಲಿ ಕುಳಿತುಕೊಂಡು ಸೇವಿಸಿ ಶ್ರೀ ಮಹಾಲಕ್ಷ್ಮಿ ದೇವಿ ಕೃಪೆಗೆ ಪಾತ್ರರಾದರು.ಬಂದಂತ ಭಕ್ತಾದಿಗಳಿಗೆ ಪುರಸಭೆ ಮತ್ತು ತಾಲೂಕ ಆಡಳಿತ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಸಂರ‍್ಕ ಹಾಗೂ ಸ್ವಚ್ಛತೆ ಬಂದ ಭಕ್ತಾದಿಗಳಿಗೆ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿಗಳಿಂದ ವ್ಯವಸ್ಥೆ ಮಾಡಲಾಯಿತು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಯಿತಳದಲ್ಲಿ ದೇವಿಯ ರ‍್ಶನ ಪಡೆದರು.ಕಮಿಟಿಯ ಸದಸ್ಯರಾದ ರಮೇಶ್ ಬಾಬು ವಕೀಲರು, ಷಣ್ಮುಖಪ್ಪ ಸಾಹು ಗೋಗಿ, ಮಲ್ಲಪ್ಪಶೇಟ್ಟೆಗೌಡ ಹಿರೇಗೌಡ, ಹಾಗೂ ಕಮಿಟಿಯ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
