ಉದಯವಾಹಿನಿ, ನಕ್ಸಲ್ ಮುಖಂಡ ಮದ್ವಿ ಹಿದ್ಮಾ ಎನ್‌ಕೌಂಟರ್ ಸೇರಿದಂತೆ, ಸಾವಿರಾರು ನಕ್ಸಲರ ಸಾಮೂಹಿಕ ಶರಣಾಗತಿ ಮಾವೋವಾದಿಗಳ ಯುಗದ ಅಂತ್ಯವನ್ನು ಸೂಚಿಸುತ್ತಿದೆ ಎಂದು ತಜ್ಜರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಮಾರ್ಚ್ 2026ರ ವೇಳೆಗೆ ನಕ್ಸಲರನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ 2024ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದರು. ಈ ಘೋಷಣೆಗೆ ಈಗ ಸಂಪೂರ್ಣ ಪುಷ್ಠಿ ಕೊಡುವಂತಹ ವಾತಾವರಣ ನಿರ್ಮಾಣವಾಗಿದೆ. ನಕ್ಸಲ್ ನಿಗ್ರಹಕ್ಕೆ ಭದ್ರತಾ ಪಡೆಗಳು ಹಾಗೂ ಪೊಲೀಸರು ಸಾಥ್ ನೀಡಿದ್ದಾರೆ. ಇನ್ನೂ ಕೆಲವೇ ಕೆಲವು ನಕ್ಸಲರು ಸಕ್ರಿಯರಾಗಿದ್ದು, ಅವರನ್ನು ಮುಖ್ಯ ವಾಹಿನಿಗೆ ತರಲು ಯತ್ನ ನಡೆಯುತ್ತಿದೆ. ಅದು ಸಾಧ್ಯವಾಗದಿದ್ದರೆ ಎನ್‌ಕೌಂಟರ್ ಒಂದೇ ದಾರಿಯಾಗಿದೆ. ನಕ್ಸಲಿಸಂಗೆ ) ಬಿದ್ದ ದೊಡ್ಡ ಪೆಟ್ಟು, ಶರಣಾಗತಿ, ನಕ್ಸಲಿಸಂ ನಿರ್ಮೂಲನೆಯ ದೇಶದ ಹಾಗೂ ಕರ್ನಾಟಕದ ಸ್ಥಿತಿ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಅಮಿತ್ ಶಾ ಹೇಳಿದ್ದೇನು?
ಮಾವೋವಾದಿ ದಂಗೆಯನ್ನು ಮಾರ್ಚ್ 2026 ರ ವೇಳೆಗೆ ಅಳಿಸಿಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ 2024 ರಲ್ಲಿ ಘೋಷಿಸಿದ್ದರು. ಈ ಸಮಯದಲ್ಲಿ ಅವರ ಹೇಳಿಕೆ ಮೇಲೆ ದೇಶದಲ್ಲಿ ಅಷ್ಟು ವಿಶ್ವಾಸ ವ್ಯಕ್ತವಾಗಿರಲಿಲ್ಲ. ಇದರ ಬೆನ್ನಲ್ಲೇ ಅವರು ಅನೇಕ ನಕ್ಸಲರ ಗುಂಪುಗಳಿಗೆ ಶರಣಾಗುವಂತೆ ಸೂಚಿಸಿದ್ದರು. ಅಲ್ಲದೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಕರೆಯನ್ನೂ ಕೊಡಲಾಗಿತ್ತು. ಇದು ಫಲಿಸದೇ ಇದ್ದಾಗ ಎನ್‌ಕೌಂಟರ್ ಅನಿವಾರ್ಯವಾಗಿತ್ತು
