ಉದಯವಾಹಿನಿ, ಬೆಳ್ಳಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ಈ ವರ್ಷದ ಉತ್ತರಾರ್ಧದಲ್ಲಿ ನಡೆಯುವ ಹಾಕಿ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣೆಸಲಿದೆ.
ಎಫ್‌ಐಎಚ್‌ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಡಿ ಗುಂಪಿನಲ್ಲಿವೆ. ಪುರುಷರ ತಂಡದ ಈ ಗುಂಪಿನಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ವೇಲ್ಸ್ ಇರುತ್ತವೆ. ಮಂಗಳವಾರ ಆ್ಯಮ್ಪರ್ಡ್ಯಾಮ್‌ನ ವೆಜೆನರ್‌ ಸ್ಟೇಡಿಯಂನಲ್ಲಿ ಡ್ರಾ ನಡೆದು ಗುಂಪುಗಳನ್ನು ವಿಂಗಡಿಸಲಾಗಿದೆ. ಭಾರತೀಯ ಮಹಿಳಾ ಹಾಕಿ ತಂಡ ಚೀನಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾವನ್ನು ಗುಂಪು ಹಂತದಲ್ಲಿ ಎದುರಿಸಬೇಕಾಗುತ್ತದೆ. ಆಗಸ್ಟ್ 15ರಿಂದ 30ರವರೆಗೆ ಟೂರ್ನಿ ನಡೆಯುತ್ತದೆ.

ಇಂಟರ್‌ನ್ಯಾಷನಲ್ ಹಾಕಿ ಫೆಡರೇಷನ್ ಮೂಲಗಳ ಪ್ರಕಾರ, ಭಾರತದ ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಗುಂಪು ಹಂತದ ಎಲ್ಲ ಪಂದ್ಯಗಳನ್ನು ನೆದರ್ಲೆಂಡ್ಸ್‌ನಲ್ಲಿ ಆಡಲಿವೆ. ಇಡೀ ಪಂದ್ಯಗಳ ವೇಳಾಪಟ್ಟಿ ಬುಧವಾರ ಬಿಡುಗಡೆಯಾಗಲಿದೆ.
ಪುರುಷರ ವಿಭಾಗದಲ್ಲಿ ಭುವನೇಶ್ವರದಲ್ಲಿ ನಡೆದ 2023ರ ಟೂರ್ನಿಯಲ್ಲಿ ಬೆಲ್ಡಿಯಂ ಸವಾಲನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಜರ್ಮನಿ ತಂಡ ಬಿ ಗುಂಪಿನಲ್ಲಿ ಬೆಲ್ಡಿಯಂ, ಫ್ರಾನ್ಸ್ ಹಾಗೂ ಮಲೇಷ್ಯಾ ಜತೆ ಸೆಣೆಸಲಿದೆ.
ಎ ಗುಂಪಿನಲ್ಲಿ ನೆದರ್ಲೆಂಡ್ಸ್ ಅರ್ಜೆಂಟೀನಾ, ನ್ಯೂಜಿಲೆಂಡ್, ಜಪಾನ್, ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಸ್ಪೇನ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಆಡಲಿವೆ. ಮಹಿಳೆಯರ ವಿಭಾಗದಲ್ಲಿ ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಚಿಲಿ ಹಾಗೂ ಜಪಾನ್, ಬಿ ಗುಂಪಿನಲ್ಲಿ ಅರ್ಜೆಂಟೀನಾ, ಜರ್ಮನಿ, ಅಮೆರಿಕಾ ಹಾಗೂ ಸ್ಕಾಟ್ಲಂಡ್, ಸಿ ಗುಂಪಿನಲ್ಲಿ ಬೆಲ್ಟಿಯಂ, ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ಇರುತ್ತವೆ.

Leave a Reply

Your email address will not be published. Required fields are marked *

error: Content is protected !!