ಉದಯವಾಹಿನಿ, ಭಾರತ ತಂಡಕ್ಕೆ T20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಸಂಜು ಸ್ಯಾಮ್ಪನ್ ಇದೀಗ ತನ್ನ ಗಮನವನ್ನು ಐಪಿಎಲ್ ನತ್ತ ಹರಿಸಿದ್ದಾರೆ. 120 ವಿಶ್ವಕಪ್ ನಲ್ಲಿನ ತನ್ನ ಶ್ರೇಷ್ಠ ಫಾರ್ಮ್ ಅನ್ನು ಪ್ರಮುಖ T20 ಪಂದ್ಯಾವಳಿಯಲ್ಲಿ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
“T20 ವಿಶ್ವಕಪ್ ಗೆದ್ದಿರುವುದು ನನ್ನ ವೃತ್ತಿ ಬದುಕಿನ ಮಹತ್ವದ ಕ್ಷಣ. ಇದೀಗ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸುವೆ. ಎಂ.ಎಸ್. ಧೋನಿ ಅವರೊಂದಿಗೆ ಆಡಲು ಎದುರು ನೋಡುತ್ತಿರುವೆ. CSKಯೊಂದಿಗೆ ಆಡಲು ನಿಜಕ್ಕೂ ಉತ್ಸುಕನಾಗಿರುವೆ. ಫೋನ್ ನಲ್ಲಿ ಧೋನಿ ಅವರೊಂದಿಗೆ ಮಾತನಾಡಿರುವೆ. ಭಾರತೀಯ ತಂಡದಲ್ಲಿದ್ದಾಗ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೆ. CSKಯಲ್ಲಿ ಧೋನಿ ಅವರೊಂದಿಗೆ ಸುಮಾರು ಎರಡು ತಿಂಗಳ ಕಾಲ ಇರುವುದು ವಿಭಿನ್ನ ಅನುಭವ ನೀಡಲಿದೆ. ಅವರನ್ನು ಹತ್ತಿರದಿಂದ ನೋಡುತ್ತಾ, ಅವರಿಂದ ಪಾಠ ಕಲಿಯುವುದು ನನಗೆ ಲಭಿಸಿದ ಸುವರ್ಣಾವಕಾಶ” ಎಂದು ಸಂಜು ಹೇಳಿದ್ದಾರೆ. “ವಿಶ್ವಕಪ್ ವೇಳೆ ಚೆನ್ನೈನ ಪ್ರೇಕ್ಷಕರಿಂದ ಪಡೆದ ಬೆಂಬಲದಿಂದ ಅಚ್ಚರಿಗೊಂಡಿರುವೆ. ನಾನು ನಿಜವಾಗಿಯೂ ಅದೃಷ್ಟವಂತ. ಐಪಿಎಲ್ ನಲ್ಲಿ ಅಭಿಮಾನಿಗಳನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. CSK ಒಳಿತಿಗಾಗಿ ತನ್ನ ಶ್ರೇಷ್ಠ ಪ್ರದರ್ಶನ ನೀಡುವೆ” ಎಂದು ಸಂಜು ಹೇಳಿದ್ದಾರೆ.
