ಉದಯವಾಹಿನಿ,  ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಂಗಳವಾರ ಬಿಡುಗಡೆಯಾದ ಮಹಿಳೆಯರ ಏಕದಿನ ಬ್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಉಪ ನಾಯಕಿ ಸ್ಮತಿ ಮಂಧಾನ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ನ್ಯೂಝಿಲ್ಯಾಂಡ್‌ನ ಹಿರಿಯ ಆಟಗಾರ್ತಿ ಸೋಫಿ ಡಿವೈನ್ ಎರಡು ಸ್ಥಾನ ಕಳೆದುಕೊಂಡ ನಂತರ 9ನೇ ಸ್ಥಾನದಲ್ಲಿದ್ದು, ಹರ್ಮನ್‌ಪ್ರೀತ್‌ ಏಳನೇ ಸ್ಥಾನಕ್ಕೇರಿದ್ದಾರೆ. ಜೆಮಿಮಾ ರೋಡ್ರಿಗ್ಸ್ 12ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಝಿಂಬಾಳ್ವೆ ವಿರುದ್ಧದ ಮಹಿಳೆಯರ ಚಾಂಪಿಯನ್‌ಶಿಪ್ ಸರಣಿಯ ಕೊನೆಯ ಪಂದ್ಯದಲ್ಲಿ 94 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್‌ನ ಬ್ಯಾಟರ್ ಮ್ಯಾಡಿ ಗ್ರೀನ್ಸ್ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದಾರೆ. ಐದು ಸ್ಥಾನಗಳಲ್ಲಿ ಭಡ್ತಿ ಪಡೆದು 17ನೇ ಸ್ಥಾನ ತಲುಪಿದ್ದಾರೆ. ಟಿ-20 ರ್ಯಾಂಕಿಂಗ್‌ನಲ್ಲಿ ನಾಯಕಿ ಅಮೆಲಿಯಾ ಕೆರ್್ರ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 78 ರನ್ ಗಳಿಸಿದ ನಂತರ ಜೀವನಶ್ರೇಷ್ಠ 694 ಅಂಕ ಗಳಿಸಿ ಎಂಟನೇ ಸ್ಥಾನ ಉಳಿಸಿಕೊಂಡಿದ್ದಾರೆ. ಟಿ-20 ಬೌಲಿಂಗ್ ರಾಂಕಿಂಗ್‌ನಲ್ಲಿ ಜೆಸ್ ಕೆರ್್ರ 11 ಸ್ಥಾನ ಭಡ್ತಿ ಪಡೆದು 23ನೇ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!