ಉದಯವಾಹಿನಿ, ಅಹಮದಾಬಾದ್‌: ಮಾಜಿ ಪ್ರಧಾನಿ ಜವಹಾರ್‌ಲಾಲ್‌ ನೆಹರು ಅವರು ಬಾಬ್ರಿ ಮಸೀದಿ ನಿರ್ಮಿಸಲು ಸಾರ್ವಜನಿಕವಾಗಿ ಹಣವಸೂಲಿ ಮಾಡಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ನೆಹರು ಅವರು ಈ ಕ್ರಮವನ್ನು ವಿರೋಧಿಸಿ ತಡೆದರು ಎಂದು ಅವರು ಹೇಳಿದರು. ಗುಜರಾತ್‌ನಲ್ಲಿ ನಡೆದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಏಕತಾ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಕುರಿತು ಮಾತನಾಡಿದ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, “ಪಂಡಿತ್ ಜವಾಹರಲಾಲ್ ನೆಹರು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಬಾಬ್ರಿ ಮಸೀದಿ ನಿರ್ಮಿಸಲು ಬಯಸಿದ್ದರು. ಈ ಪ್ರಸ್ತಾಪವನ್ನು ಯಾರಾದರೂ ವಿರೋಧಿಸಿದರೆ, ಅದು ಗುಜರಾತಿ ತಾಯಿಗೆ ಜನಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್. ಅವರು ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಬಾಬರಿ ಮಸೀದಿಯನ್ನು ನಿರ್ಮಿಸಲು ಅನುಮತಿಸಲಿಲ್ಲ” ಎಂದು ಹೇಳಿದರು.ಗುಜರಾತ್‌ನ ಸೋಮನಾಥ್‌ ದೇವಾಲಯದ ಪುನಃಸ್ಥಾಪನೆಯ ವಿಷಯವನ್ನು ನೆಹರು ಪ್ರಸ್ತಾಪ ಮಾಡಿದಾಗ ದೇವಾಲಯ ನವೀಕರಣಕ್ಕೆ ಬೇಕಾದ 30 ಲಕ್ಷ ಮೊತ್ತವನ್ನು ಸಾರ್ವಜನಿಕರು ದೇಣಿಗೆ ನೀಡಿದ್ದನ್ನು ಸ್ಮರಿಸಿದ ಅವರು, “ಒಂದು ಟ್ರಸ್ಟ್ ಅನ್ನು ಸ್ಥಾಪಿಸಲಾಗಿತ್ತು, ಮತ್ತು ಸರ್ಕಾರದ ಹಣದಲ್ಲಿ ಒಂದು ಪೈಸೆಯನ್ನೂ ಈ (ಸೋಮನಾಥ ದೇವಾಲಯ) ಕೆಲಸಕ್ಕಾಗಿ ಖರ್ಚು ಮಾಡಲಾಗಿಲ್ಲ. ಅದೇ ರೀತಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಒಂದೇ ಒಂದು ರೂಪಾಯಿ ನೀಡಲಿಲ್ಲ. ಸಂಪೂರ್ಣ ವೆಚ್ಚವನ್ನು ದೇಶದ ಜನರು ಭರಿಸಿದ್ದಾರೆ. ಇದನ್ನು ನಿಜವಾದ ಜಾತ್ಯತೀತತೆ ಎಂದು ಕರೆಯಲಾಗುತ್ತದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!