ಉದಯವಾಹಿನಿ, ಮಸ್ಕಿ: ಜೈನಮುನಿ ಕಾಮರಾಜರ ಮಹಾರಾಜನ ಹತ್ಯೆ ಖಂಡಿಸಿ ಇಲ್ಲಿನ ಹಿಂದು ಸಮಾಜದ ಮುಖಂಡರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೌನ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಬಸವೇಶ್ವರ ವೃತ್ತದ ಬಳಿ ತಹಶೀಲ್ದಾರ ಸುಧಾ ಅರಮನೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಈ ವೇಳೆ ಮಾಜಿ ಪ್ರತಾಪಗೌಡ ಪಾಟೀಲ ಅವರು ಮಾತನಾಡಿ, ಸಮಾಜದ ಒಳತಿಗಾಗಿ ಸದಾ ಶ್ರಮಿಸುತ್ತಿದ್ದ ಜೈನ ಸಮುದಾಯ ಮುನಿಗಳನ್ನು ಕ್ರೂರವಾಗಿ ಕೊಲೆ ಗೈದಿರುವುದು ಖಂಡನೀಯ ಎಂದರು. ಪ್ರಸ್ತುತ ಕಾಂಗ್ರೆಸ್ ಬಂದಾಗಿನಿಂದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಕೊಲೆ ಹೆಚ್ಚಾಗಿದೆ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಹಿಂದೂ ಕಾರ್ಯಕರ್ತರ ರಕ್ಷಣೆ ಇಲ್ಲದಂತಾಗಿದೆ. ಜೈನ ಮುನಿಗಳಿಗೆ ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆ ಈ ಪ್ರಕರಣಕ್ಕೆ  ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮಹಾದೇವಪ್ಪಗೌಡ, ಪ್ರಕಾಶ ಧಾರಿವಾ¯, ಸಿದ್ದಣ್ಣ ಹೂವಿನಭಾವಿ, ಡಾ, ಬಿ.ಹೆಚ್ ದಿವಟರ, ಲಕ್ಷೀಕಾಂತ ನಾರಯಣ ಶಟ್ಟಿ, ಅಮರೇಶ ಬ್ಯಾಳಿ, ವಸಂತ ಭಾವಿ, ಮೌನೇಶ ನಾಯಕ, ರಾಕೇಶ ಪಾಟೀಲ, ನಾಗರಾಜ ಯಂಬಲದ, ಮಲ್ಲಣ್ಣ ಬ್ಯಾಳಿ, ಬಸ್ಸಪ್ಪ ಬ್ಯಾಳಿ, ಲಕ್ಷೀಕಾಂತ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!