ಉದಯವಾಹಿನಿ,ಕಾರಟಗಿ
: ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆAಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಮೂಲಕ ಗಮನ ಸೆಳೆದ ಪಟ್ಟಣದ ಎರಡನೇ ವಾರ್ಡನ ಉಪ್ಪಾರ ಓಣಿಯ ನಿವಾಸಿ ರೈತ ಪಂಪಾಪತಿ. ಲಕ್ಷಿö್ಮÃ ಸಜ್ಜಿಹೊಲ ದಂಪತಿಯ ಪುತ್ರ ಸಂತೋಷಕುಮಾರ್ನ್ನು ತಾಲೂಕಾ ರೈತ ಸಂಘ ಹಾಗೂ ಉಪ್ಪಾರ ಓಣಿಯ ನಿವಾಸಿಗಳು ಶುಕ್ರವಾರ ಹುಡೇದ ತಾಯಮ್ಮ ದೇವಸ್ಥಾನದಲ್ಲಿ ಸನ್ಮಾನಿಸಿ ಗೌರವಿಸಿದರು.
ನಂತರ ತಾಲೂಕಾ ರೈತ ಸಂಘದ ಅಧ್ಯಕ್ಷ ನಾರಾಯಣ ಇಡೀಗೇರ ಮಾತನಾಡಿ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಹೊತ್ತ ಆಗಿನ ಹೈದ್ರಾಬಾದ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕ ಭಾಗದ ರೈತ ಕುಟುಂಬದ ಪ್ರತಿಭೆ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆAಟ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಮೂಲಕ ಸಾಧನೆಗೈದಿದ್ದಾನೆ. ರೈತ ಕುಟುಂಬದಿAದ ಬಂದAತಹ ಈ ಪ್ರತಿಭೆ ಇನ್ನಷ್ಟು ಎತ್ತರಕ್ಕೆ ಬೆಳಯಲಿ ಎಂಬುದು ನಮ್ಮೆಲ್ಲರ ಆಶಯ. ಹೀಗೆ ರೈತಾಪಿ ಕುಟುಂಬಗಳು ಮಕ್ಕಳ ಶೈಕಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ರೈತ ಕುಟುಂಬದ ಪ್ರತಿಯೊಬ್ಬ ಸದಸ್ಯನು ವಿದ್ಯಾವಂತ ನಾಗಬೇಕು. ಸುಭದ್ರ ದೇಶನಿರ್ಮಾಣಕ್ಕೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಎನನ್ನಾದರು ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಮಕ್ಕಳ ಮುಂದಿನ ಭವಿಷ್ಯ ಉಜ್ವಲಗೊಳಿಸಲು ಎಲ್ಲಾ ಮಕ್ಕಳ ಪಾಲಕರು ಶ್ರಮಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂತೋಷಕುಮಾರ್ ನನ್ನ ಕುಟುಂಬದ ಎಲ್ಲಾ ಸದಸ್ಯರ ಪ್ರೋತ್ಸಾಹ, ಗುರು-ಹಿರಿಯರ ಆಶೀರ್ವಾದದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಈ ಸಂದರ್ಬದಲ್ಲಿ ರೈತ ಸಂಘ ಹಾಗೂ ವಾರ್ಡನ ಪ್ರಮುಖರಾದ ಶರಣಪ್ಪ ಕುರಿ, ಭಾಷಪ್ಪ, ರಂಗಪ್ಪ, ಪರಸಪ್ಪ ಮಡಿವಾಳ, ಭಂಗಿ ರಮೆಶ, ಹನುಮಂತ ಕಾಯಿಗಡ್ಡಿ, ಮುದೆಪ್ಪ, ಯಂಕಣ್ಣ, ಭಾಷಪ್ಪ ಬಂಡಿ, ಬುಡ್ಡಪ್ಪ, ಹುಸೇನ್ ಸಾಬ್, ಪರಸಪ್ಪ ಕೊಂಡೇಕರ, ಶರಣಪ್ಪ ಸಜ್ಜಿಹೊಲ, ಪಂಪಾಪತಿ ಇತರರು ಇದ್ದರು.
