ಉದಯವಾಹಿನಿ,ರಾಮನಗರ: ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು  ಭಾರತದ ಇಸ್ರೋದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಐತಿಹಾಸಿಕ ಚಂದ್ರಯಾನ ಉಡಾವಣೆ-೩ ನೇರ ನೇರ ವೀಕ್ಷಣೆ ಮಾಡುವ ಮೂಲಕ ಸಂಭ್ರಮಿಸಿದರು. ರಾಮನಗರದ ಯುನಿರ‍್ಸಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಚಂದ್ರಯಾನ ನೇರ ವೀಕ್ಷಣೆ ಮಾಡಲು ಬೃಹತ್ ಎಲ್.ಇ.ಡಿ. ಪರದೆಯನ್ನು ಅಳವಡಿಸಲಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ಕಾಲೇಜು ವಿದ್ಯರ‍್ಥಿಗಳು ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯರ‍್ಥಿಗಳು ಶುಕ್ರವಾರ ಮಧ್ಯಾನ್ಹ ಚಂದ್ರಯಾನ ಉಡಾವಣೆಯ ನೇರ ಪ್ರಸಾರವನ್ನು ವೀಕ್ಷಣೆ ಮಾಡುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಕಾಲೇಜಿನ ಸಂಸ್ಥಾಪಕ ಕರ‍್ಯರ‍್ಶಿ ಎ.ಜೆ.ಸುರೇಶ್, ಪ್ರಾಂಶುಪಾಲರಾದ ಚೇತನ್ ಕುಮಾರ್ ಸೇರಿದಂತೆ ಶಾಲಾ ಮತ್ತು ಕಾಲೇಜಿನ ಎಲ್ಲಾ ಉಪನ್ಯಾಸಕರು ಈ ಒಂದು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡಾವಣೆ ವೀಕ್ಷಣೆಗೆ ಮುನ್ನ ವಿದ್ಯರ‍್ಥಿಗಳಿಗೆ ಚಂದ್ರಯಾನ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.ನಗರದ ಕೆಂಪೇಗೌಡ ವೃತ್ತದಲ್ಲಿರುವ ಮೊರರ‍್ಜಿ ವಸತಿ ಶಾಲೆ ಸೇರಿದಂತೆ ಹಲವು ಶಾಲೆಗಳಲ್ಲಿ ಶಾಲಾ ಮಕ್ಕಳಿಗೆ ಚಂದ್ರಾಯಾನ ಉಡಾವಣೆಯ ನೇರಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!