ಉದಯವಾಹಿನಿ, ಬೀದರ್ : ಔರಾದ ತಾಲೂಕಿನ ಎಕಲಾರ ಗ್ರಾಪಂ ವ್ಯಾಪ್ತಿಯ ಕೊಳ್ಳೂರ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರಿನಿಂದಾಗಿ ನರ‍್ಮಲ್ಯ ಉದ್ಭವಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರು ದಿನ ದೂಡುವಂತಾಗಿತ್ತು ಇದನ್ನು ಜು ೧೧ ರಂದು ಉದಯವಾಹಿನಿ ಪತ್ರಿಕೆಯಲ್ಲಿ ‘ಗಬ್ಬೆದ್ದು ನಾರುತ್ತಿದೆ ರಸ್ತೆಯ ಚರಂಡಿ ನೀರು, ರೋಗದ ಭೀತಿಯಲ್ಲಿ ಗ್ರಾಮಸ್ಥರು’ ಶರ‍್ಷೀಕೆಯಡಿ ಸುದ್ದಿ ಬಿತ್ತರಿಸಿತ್ತು ಇದರಿಂದ ಎಚ್ಚೆತ್ತ ಗ್ರಾಪಂ ಸ್ವಚ್ಛತೆ ಮುಂದಾಗಿದೆ.
ಗ್ರಾಮದ ತುಂಬೆಲ್ಲಾ ಸ್ವಚ್ಛತೆ ಕರ‍್ಯ ಕೈಗೊಂಡಿದ್ದಾರೆ. ರಾತ್ರಿ ಹೊತ್ತು ಓಡಾಡಲು ವಿದ್ಯುತ್ ಕಂಬಗಳ ಬಲ್ಬ್ ಹಾಳಾಗಿತ್ತು ಇಗ ಕಂಬಗಳಿಗೆ ಹೋಸ ಬಲ್ಪಗಳನ್ನು ಅಳವಡಿಸುತ್ತಿದ್ದಾರೆ.
ಗ್ರಾಮಕ್ಕೆ ನೀರು ಪೂರೈಕೆ ಮಾಡುವ ಬಾವಿ ನೀರು ಮತ್ತು ವಾಟರ್ ಟ್ಯಾಂಕ್ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ. 
ಸಾಮಾಜಿಕ ಸಮಸ್ಯೆ ಕುರಿತು ವರದಿ ಬಿತ್ತರಿಸಿದ ಉದಯವಾಹಿನಿ ಪತ್ರಿಕೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

