
ಉದ
ಯವಾಹಿನಿ, ಇಂಡಿ: ತಾಲ್ಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಎಂಟನೇ ಹಾಗೂ ಪ್ರಥಮ ಪಿಯು ವಿದ್ಯರ‍್ಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು. ರ‍್ಷಾ ಸಂಗಡಿಗರಿಂದ ಪ್ರರ‍್ಥನಾ ಗೀತೆಯ ಮುಖಾಂತರ ಈ ಕರ‍್ಯಕ್ರಮವನ್ನು ವೇದಿಕೆ ಮೇಲಿರುವ ಗಣ್ಯರು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಸಸಿಗೆ ನೀರು ಉಣಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ವಿದ್ಯರ‍್ಥಿಗಳಾದ ಮೊಹಮ್ಮದ್ ಸುಫಿಯಾನ್ ಕಾರಬಾರಿ, ಸುಭಾಷ ಗೌಡ ಪಾಟೀಲ ಸುಶ್ಮಿತಾ ಸಾಲಿ, ಶಾಹಿದ ಪಟೇಲ, ಮೇಘಾ ಜೋಡಮೂಟೆ ಈ ವಿದ್ಯರ‍್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎ ಓ ಹೂಗಾರ ಮುಖ್ಯಗುರುಗಳು ಇಂಡಿ ಇವರು ಮಾತನಾಡುತ್ತಾ ನಮ್ಮ ಜೀವನದಲ್ಲಿ ಸಮಯವೇ ಅತ್ಯಂತ ಶ್ರೇಷ್ಠವಾದದ್ದು ಅದನ್ನು ಹಾಳು ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು ಒಮ್ಮೆ ಸಮಯ ಕಳೆದು ಹೋದರೆ ಮತ್ತೆ ಮರಳಿ ಬಾರದು ಹಾಗೂ ವಿದ್ಯರ‍್ಥಿಯು ತನ್ನ ಜೀವನದಲ್ಲಿ ತನಗೆ ಏನು ಅವಶ್ಯಕತೆ ಇರುತ್ತದೆ ಅದನ್ನು ಮಾತ್ರ ಪಡೆದುಕೊಳ್ಳಲು ಪ್ರಯತ್ನಿಸಿ ಇದರೊಂದಿಗೆ ಕಲಿಸಿದ ಗುರುವಿನೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳಿ ನಿಮಗೆ ಕಲಿಸಿದ ಗುರು ತಂದೆ ತಾಯಿ ನಿಮ್ಮಿಂದ ಬಯಸುವದು ಕೇವಲ ನಿಮ್ಮ ಏಳಿಗೆ ಮಾತ್ರ ಅದಕ್ಕಾಗಿ ಗುರುವಿಗೆ ತಾಯಿ ತಂದೆಗೆ ವಿನಯವಂತರಾಗಿ ನಡೆದುಕೊಳ್ಳಿ, ಇಂದಿನ ದಿನಮಾನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತ ಹೊರಟಿದೆ ಆದರೆ ವಿದ್ಯರ‍್ಥಿಗಳು ಅದರ ದಾಸನಾಗಬಾರದು. ಮೊಬೈಲಿನಿಂದ ನಿಮ್ಮ ತರಗತಿಗೆ ಸಂಬಂಧಪಟ್ಟ ವಿಷಯ ಮಾತ್ರ ಪಡೆದುಕೊಳ್ಳಿ ಇನ್ನುಳಿದ ವಿಷಯಗಳು ನೀವು ನೋಡಬಾರದು ಎಂದು ಎಚ್ಚರಿಸಿದರು. ಮೊದಲು ನಿಮ್ಮ ಹತ್ತಿರ ಬುದ್ಧಿ ಇರಬೇಕು ನಂತರ ಜ್ಞಾನ ತದನಂತರ ಕೌಶಲ್ಯ ಹೊಂದಿದ್ದರೆ ಪ್ರಗತಿ ಹೊಂದಲು ಸಾಧ್ಯ ಮೊದಲು ನೀವು ನಿಮ್ಮನ್ನು ಪ್ರೀತಿಸಿ ಅಂದಾಗ ನಿಮಗೆ ನಿಮ್ಮ ಮೇಲೆ ಭರವಸೆ ಬರುತ್ತದೆ. ಎಂದು ಸವಿಸ್ತಾರವಾಗಿ ಮಾತನಾಡಿದರು. ನಂತರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ ಬಿ ಬಿರಾದಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಇನ್ನೂ ಈ ಶಿಕ್ಷಣ ಸಂಸ್ಥೆಯಲ್ಲಿ ಎನ್‌ಸಿಸಿಯ ಕೊರತೆ ಇದೆ ಈಗಾಗಲೇ ಹಲವಾರು ರ‍್ಷಗಳಿಂದ ಪ್ರಯತ್ನದಲ್ಲಿರುವೆ ಆದಷ್ಟು ಬೇಗನೆ ಎನ್ ಸಿ ಸಿ ತರುವ ವ್ಯವಸ್ಥೆ ಮಾಡುವೆ ಎಂದು ತಿಳಿಸಿದರು ವೇದಿಕೆ ಮೇಲೆ ಆಡಳಿತ ಅಧಿಕಾರಿಗಳಾದ ಎ ಎಸ್ ಪಾಟೀಲ ಪ್ರಾಂಶುಪಾಲರಾದ ಎಸ್ ಆರ್ ರಾಠೋಡ ಮುಖ್ಯ ಗುರುಗಳಾದ ಎ ಎಮ್ ಮುಚ್ಚಂಡಿ. ತರಗತಿಯ ಶಿಕ್ಷಕಿಯರಾದ ಪುಷ್ಪಾ ಅಥಣಿ ಮತ್ತು ರಶ್ಮಿ ನಾಗಠಾಣ ಮುಂತಾದವರು ವೇದಿಕೆಯ ಮೇಲಿದ್ದರು. ಅತಿಥಿಗಳು ೮ನೇ ಹಾಗೂ ಪಿಯು ಪ್ರಥಮ ರ‍್ಷದ ವಿದ್ಯರ‍್ಥಿಗಳಿಗೆ ಪುಷ್ಪ ಕೊಡುವದರ ಮೂಲಕ ಸ್ವಾಗತಿಸಿದರು. ಈ ಕರ‍್ಯಕ್ರಮದ ನಿರೂಪಣೆಯನ್ನು ಭಾಗ್ಯಶ್ರೀ ಪಾಟೀಲ ಮತ್ತು ಭಾಗ್ಯಶ್ರೀ ನಿಡೋಣಿ ಇವರು ನೆರವೇರಿಸಿ ಕೊಟ್ಟಿದ್ದಾರೆ. ದೈಹಿಕ ಶಿಕ್ಷಕರಾದ ಶಿವಾನಂದ ಕೆಂಗನಾಳ ಸ್ವಾಗತಿಸಿದರು. ರಾಗಿಣಿ ಮೇಲಿನಮನಿ ವಿದ್ಯರ‍್ಥಿನಿ ವಂದನರ‍್ಪಣೆ ನೆರವೇರಿಸಿ ಕೊಟ್ಟರು
