ಉದಯವಾಹಿನಿ, ರಾಮನಗರ: ತಾಲ್ಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,
ಬಿ ಸಿ ಟ್ರಸ್ಟ್ ನ ಅಂಚೆ ಪಾಳ್ಯ ವಲಯದ ಮಂಚನಾಯನಕನಹಳ್ಳಿ ಗ್ರಾಮ ಪಂಚಾಯಿತಿ ಯ ಭದ್ರಪೂರ ಗ್ರಾಮದ ಶ್ರೀ ಚೈತನ್ಯ ಸ್ವಸಹಾಯ ಸಂಘದ ಸದಸ್ಯರಾದ ಸೌಮ್ಯ ರವರು ೨ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದು ಸುಮಾರು ೪ ಲಕ್ಷ ಖರ್ಚಾಗಲಿದೆ . ಇವರು ತುಂಬಾ ಬಡವರಾಗಿದ್ದು
ಸದಸ್ಯರ ಪರಿಸ್ಥಿತಿ ಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರಿಗೆ ಮನವಿ ಸಲ್ಲಿಸಿದ್ದು ಇವರಿಗೆ ಶ್ರೀ ಕ್ಷೇತ್ರ ರ‍್ಮಸ್ಥಳದ ರ‍್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಕ್ರಿಟಿಕಲ್ ಇಲ್ ನೆಸ್ ಕರ‍್ಯಕ್ರಮದಡಿಯಲ್ಲಿ ೨೫,೦೦೦ ರೂ. ಸಹಾಯಧನ ಮಂಜೂರು ಮಾಡಿರುತ್ತಾರೆ. ಮಂಜೂರು ಮಾಡಿದ
ಚೆಕ್ ನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮನಗರ ಯೋಜನಾಧಿಕಾರಿ ಮುರಳೀಧರ್ ಸದಸ್ಯರ ಮನೆಗೆ ಭೇಟಿ ನೀಡಿ ವಿತರಿಸಿದರು.
ವಲಯದ ಮೇಲ್ವಿಚಾರಕರಾದ ನಾಗೇಶ್,, ಸೇವಾಪ್ರತಿನಿಧಿ ಗೀತಾ ,ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
