ಉದಯವಾಹಿನಿ, ಬೆಂಗಳೂರು: ಯಾವ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಭ್ರಷ್ಟಾಚಾರ ನಡೆದಿರುವುದಾಗಿ ನಾನು ಹೇಳಿಲ್ಲ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಹೇಳಿದ್ದಾರೆ.
ಪ್ರತಿಕ್ರಿಯಿಸಿದ ಅವರು, ನಾನು ಇಂತಹ ಸರ್ಕಾರದಲ್ಲಿ ಭ್ರಷ್ಟಾಚಾರ ಇತ್ತು ಎಂದು ಹೇಳಿಲ್ಲ. ಭಾರತದಲ್ಲಿ ಸರ್ವೆ ಆಗಿರುವುದನ್ನು ನಾನು ಹೇಳಿದ್ದೇನೆ. ಯಾವ್ಯಾವ ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂಬುದರ ಬಗ್ಗೆ ಬಂದ ಸರ್ವೆಯನ್ನು ಉಲ್ಲೇಖಿಸಿ ಮಾತನಾಡಿದ್ದೆ ಎಂದು ಸ್ಪಷ್ಟನೆ ನೀಡಿದರು. 2019 ರಲ್ಲಿ ಆಗಿರುವ ಸರ್ವೆ ಆಗ 63% ಭ್ರಷ್ಟಾಚಾರ ಇದೆ ಎಂಬ ಮಾಹಿತಿ ಬಂದಿದೆ. ನಾನು ಯಾವ ಸರ್ಕಾರ ಅಂತಾ ಹೇಳಿಲ್ಲ. ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದ್ದು ರಾಜಕೀಯ ನಾಯಕರು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಈ ಭ್ರಷ್ಟಾಚಾರಕ್ಕೆ ಸಮಾಜ, ಜನರು ಕೂಡ ಕಾರಣ. ಎಲ್ಲಾ ಸರ್ಕಾರಗಳಲ್ಲಿ ಕೂಡ ಭ್ರಷ್ಟಾಚಾರದಲ್ಲಿ ಇವೆ. ಕರೆಪ್ಷನ್ ಆಫ್ ಸರ್ವೆ ಅಫ್ ಇಂಡಿಯಾ ಸರ್ವೆಯನ್ನು ನಾನು ಹೇಳಿದ್ದೇನೆ ಅಷ್ಟೇ. ನನ್ನ ಹೇಳಿಕೆ ದುರ್ಬಳಕೆ ಮಾಡಲಾಗಿದೆ. ನನ್ ಹೇಳಿಕೆಯನ್ನು ಸ್ವಾರ್ಥಕ್ಕೆ ಬಳಸಬೇಡಿ ಎಂದು ಎಂದು ಅವರು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!