ಉದಯವಾಹಿನಿ,
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ನೂತನ ಅದ್ಯಕ್ಷರಾಗಿ ಅಶೋಕ್‌ಕುಮಾರ್ ಅವಿರೋಧವಾಗಿ ಆಯ್ಕೆಯಾದರು
ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ಅದ್ಯಕ್ಷರ ಸ್ಥಾನ ತೆರವಾಗಿದ ಹಿನ್ನೆಲೆಯಲ್ಲಿ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅದ್ಯಕ್ಷರ ಸ್ಥಾನಕ್ಕೆ ಅಶೋಕ್‌ಕುಮಾರ್ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸತೀಶ್ ಅಶೋಕ್‌ಕುಮಾರ್‌ರವರನ್ನು ನೂತನ ಅದ್ಯಕ್ಷರೆಂದು ಘೋಷಿಸಿದರು.
ನೂತನ ಅದ್ಯಕ್ಷರಾಗಿ ಆಯ್ಕೆಯಾದ ಆಶೋಕ್‌ಕುಮಾರ್‌ರವರನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ.ಎಸ್.ಪ್ರಭಾಕರ್, ತಾಪಂ ಮಾಜಿ ಸದಸ್ಯ ರವಿ, ಗ್ರಾಪಂ ಮಾಜಿ ಅದ್ಯಕ್ಷ ಚಂದ್ರೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅದ್ಯಕ್ಷ ಎಲ್.ಪಿ.ದೇವರಾಜು, ಕೃಷ್ಣೇಗೌಡ್ರು, ಮುಖಂಡರಾದ ಲಕ್ಷ್ಮೀಪುರ ಮಂಜು, ಬಿದರಹಳ್ಳಿ ಸುರೇಶ್ ಸೇರಿಂದತೆ ಹಲವು ಬೆಂಬಲಿಗರು ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳು ಅಭಿನಂದಿಸಿದ್ದಾರೆ. ನೂತನ ಅಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ ಮಾತನಾಡಿ ನನಗೆ ಸಿಕ್ಕಿರುವ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆಂದುಕೊAಡು ಪ್ರಾಮಾಣಿಕವಾಗಿ ಜನಸೇವೆ ಮಾಡಲಿದ್ದೇನೆ. ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳೀಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್, ರಘು, ಶ್ರೀಧರ್, ಮಮತಾ, ಅನಿತಾ, ಉಮೇಶ್, ಕನಕ, ಚಂದ್ರಕಲಾ, ನೇತ್ರಾವತಿ, ಪುಷ್ಪಲತಾ, ಬಸವರಾಜು, ಮಂಜುಳ, ಶ್ವೇತಾ, ರಾಜಶೇಖರಮೂರ್ತಿ, ಸ್ವಾಮಿ, ಪಿ.ಡಿ. ಸುರೇಶ್, ಕಾರ್ಯದರ್ಶಿ ಯೋಗೇಶ್, ಮುಖಂಡರಾದ ಪ್ರಕಾಶ್, ರಾಮಣ್ಣ, ಬಬ್ರು, ಕೆಂಪರಾಜು, ಕುಮಾರ್, ಸೇರಿದಂತೆ ಹಲವರಿದ್ದರು.
