
ಉದಯವಾಹಿನಿ ದೇವದುರ್ಗ: ಪಟ್ಟಣದಲ್ಲಿ ನಡೆಯುವ ವಾರದ ಶನಿವಾರ ಸಂತೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಬೇರೆಕಡೆ ಸ್ಥಳಾಂತರ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶಟ್ಟಿ ಬಣ ತಾಲೂಕ ಸಮಿತಿ ಪದಾಧಿಕಾರಿಗಳು ಶನಿವಾರ ತಹಶೀಲ್ದಾರ ವೈ.ಕೆ.ಬಿದರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಹಶೀಲ್ ಕಚೇರಿ, ಆಸ್ಪತ್ರೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸೇರಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಟ್ರಾಫಿಕ್ ನಿಯಂತ್ರಣ ಮಾಡಲು ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಡುವಂತಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು ಸಂತೆಗೆ ನಿಗದಿಪಡಿಸಿದ ಜಾಗಕ್ಕೆ ಸ್ಥಳಾಂತರ ಮಾಡಲು ಕ್ರಮವಹಿಸಬೇಕು. ಕೆಲಸ ಕಾರ್ಯಗಳಿಗೆ ತುರ್ತ ಹೋಗಲು ಬೈಕ್ ಸವಾರರು ಸಂತೆ ದಾಟಿ ಹೋಗಲು ತೊಂದರೆ ಪಡುತ್ತಿದ್ದಾರೆ. ಮಾಳೆಗಡ್ಡಿಯಲ್ಲಿ ಸಂತೆಗೆ ಜಾಗ ಮೀಸಲಿದೆ. ಅಲ್ಲಿಗೆ ಸಂತೆ ಸ್ಥಳಾಂತರ ಮಾಡಲು ಮೀನಮೇಷ ಎಣಿಸಲಾಗುತ್ತಿದೆ. ಶನಿವಾರದೆಂದು ಗ್ರಂಥಾಲಯಕ್ಕೆ ಬರುವಂತ ನೂರಾರು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಟ್ರಾಫಿಕ್‍ನಲ್ಲಿ ಅರ್ಧಗಂಟೆಗಳ ಕಾಲ ಅಧಿಕಾರಿಗಳು ಸಿಕಿಕೊಂಡು ತೊಂದರೆ ಪಟ್ಟಿದ್ದಾರೆ. ಇಷ್ಟಲೇ ಸಮಸ್ಯೆ ಸ್ಥಳಾಂತರ ಮಾಡುವಂತೆ ಹಲವು ಸಂಘಟನೆ ಹತ್ತಾರೂ ಬಾರಿ ಹೋರಾಟ ಮಾಡಲಾಗಿದೆ. ಇಲ್ಲಿವರೆಗೆ ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿರುವುದು ಕಾರಣ ಎನ್ನುಗೊತ್ತಾಗುತ್ತಿಲ್ಲ. ಒಂದು ವೇಳೆ ಸಂತೆ ಸ್ಥಳಾಂತರ ಮಾಡಲು ವಿಳಂಬ ಮಾಡಿದರೆ ಕಚೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ ಹೀರಾ, ತಾಲೂಕಾಧ್ಯಕ್ಷ ಬಸವರಾಜ ಗೋಪಾಳಪುರು, ಎಂ.ಶಾಂತಕುಮಾರ, ಅಮರೇಶ ವಂದಲಿ, ಸಂತೋಷ ಜಿನ್ನಾಪುರು ಸೇರಿ ಇದ್ದರು.
