ಉದಯವಾಹಿನಿ ಸಿಂಧನೂರು: ನಗರದ ಕೇಂದ್ರ ಭಾಗದಲ್ಲಿ ಪ್ರಾರಂಭವಾದ ಈ ಡಾ.ಬಿ .ಆರ್ ಅಂಬೇಡ್ಕರ್ ಸೇವಾ ಟ್ರಸ್ಟ್ ಗ್ರಂಥಾಲಯಕ್ಕೆ ಶಾಸಕನಾಗಿ ನಾನು ಸರ್ಕಾರದಿಂದ ಸಿಗುವ ಎಲ್ಲಾ ಸಹಾಯ ,ಸೌಲಭ್ಯಗಳನ್ನು ಒದಗಿಸಲು ಸತ ಸಿದ್ದು ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದರು.ನಗರದ ಸಾರ್ವಜನಿಕ ಆಸ್ಪತ್ರೆ‌ಯ ಎದುರುಗಡೆ ಬರುವ ಡಾ.ಬಿ ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ವತಿಯಿಂದ ನಡೆಸುವ ಗ್ರಂಥಾಲಯ ಓದುವ ಹಸಿವಿನ ಹಂಬಲ ಇರುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರು. ಇಲ್ಲಿ ಪ್ರತಿಯೊಂದು ಪುಸ್ತಕಗಳನ್ನು ಓದುತ್ತಾ ಇದರಿಂದ ಸಿಗುವ ಲಾಭವನ್ನು ವಿದ್ಯಾರ್ಥಿಗಳು ಸಾರ್ವಜನಿಕರು ಓದುಗರು ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು. ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ ಈ ಗ್ರಂಥಾಲಯಕ್ಕೆ ಸ್ಥಳದ ಅವಶ್ಯಕತೆ ಇರುವುದರಿಂದ ಇದರ ಅವಶ್ಯಕತೆ ಮನಗೊಂಡು ನನಗೆ ಮನವಿ‌ ಮಾಡಿಕೊಂಡಾಗ ಅದಕ್ಕೆ ತಕ್ಕಂತೆ ಸ್ಥಳವನ್ನು ಗ್ರಂಥಾಲಯಕ್ಕೆ ಮಂಜೂರು ಮಾಡಿಸಿಕೊಟ್ಟಿದ್ದೆನೆಂದು ಈಗ ಲಿಂಗಸೂಗೂರು ಎಸಿ ಕಛೇರಿ ಇನ್ನು ದಾಖಲಾತಿಗಳು ಇವೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ , ನಗರಸಭೆ ಅದ್ಯಕ್ಷ ಮಲ್ಲಿಕಾರ್ಜುನ ಪಾಟೀಲ ,ಸೋಮನಗೌಡ ಬಾದರ್ಲಿ ,ಯಮನಪ್ಪ ಗಿರಿಜಾಲಿ ,ಅಲ್ಲಮ ಪ್ರಭು ಪೂಜಾರ ,ಹನ್ಮಂತಪ್ಪ ಜೀನೂರು ,ರಾಮಣ್ಣ ಗೋನ್ವಾರ ,ನರಸಪ್ಪ ಕಟ್ಟೀಮನಿ , ಅಯ್ಯಪ್ಪ ಸುಕಾಲಪೇಟೆ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು ‌.

Leave a Reply

Your email address will not be published. Required fields are marked *

error: Content is protected !!