
ಉದಯವಾಹಿನಿ ದೇವರಹಿಪ್ಪರಗಿ: ಪಟ್ಟಣದ ಮಾರುಕಟ್ಟೆಯಲ್ಲಿರುವ ಮಲ್ಲಿಕಾರ್ಜುನ ಪ್ರಿಂಟಿಂಗ್ ಪ್ರೆಸ್ ಸುಮಾರು 50ವರ್ಷಗಳ ಸುದಿರ್ಘ ಮುದ್ರಣ ಸೇವೆ ಪೂರೈಸಿದ ಮಾಲೀಕರಾದ ಪ್ರಭಾಕರ ಕುಲಕರ್ಣಿ ಅವರಿಗೆ ಡಾ.ಫ ಗು ಹಳಕಟ್ಟೆಯವರ 143ನೇ ಜನ್ಮದಿನದ ಅಂಗವಾಗಿವಿಜಯಪುರ ಪ್ರಿಂಟಿಂಗ್ ಪ್ರೆಸ್ ಹಾಗೂ ವರ್ಕರ್ಸ ಅಸೋಸಿಯೇಷನ್ ವತಿಯಿಂದ ಮುದ್ರೋದ್ಯಮಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.ವಿಜಯಪುರ ಪಟ್ಟಣದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರದಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಹಲವಾರು ವರ್ಷಗಳಿಂದ ಮುದ್ರಣ ಕ್ಷೇತ್ರದಲ್ಲಿ ಮಾಲೀಕರಾಗಿ/ ಕೆಲಸಗಾರರಾಗಿ ತಮ್ಮ ಅನುಪಮ ಹಾಗೂ ಗಣನೀಯ ಸೇವೆಯನ್ನು ಪರಿಗಣಿಸಿ ದೇವರಹಿಪ್ಪರಗಿ ಪಟ್ಟಣದ ಪ್ರಭಾಕರ ಕುಲಕರ್ಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪಡೆದದ್ದಕ್ಕೆ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.ಈ ಸಂದರ್ಭದಲ್ಲಿ ಮುದ್ರಣ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಪ್ರಮುಖರು, ಗಣ್ಯರು, ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.
