
ಉದಯವಾಹಿನಿ ಕೋಲಾರ :- ತಾಲ್ಲೂಕಿನ ನರಸಾಪುರ ಗ್ರಾಮದ ಬೆಸ್ಕಾಂ ಕಚೇರಿಗೆ ನೂತನ ಬೆಸ್ಕಾಂ ಅಧಿಕಾರಿಯಾಗಿ ಆಯ್ಕೆಯಾದ ಆಲಿ ಬಾಷಾ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ತಾಲ್ಲೂಕಿನ ನರಸಾಪುರ ಗ್ರಾಮದ ಬೆಸ್ಕಾಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲೋ ಬ್ರಿಕ್ಸ್ ಕಂಪನಿಯ ನಾರಾಯಣಸ್ವಾಮಿ, ಮತ್ತು ಕನ್ನಡ ಸೇನೆಯ ಕೋಲಾರ ತಾಲೂಕು ಅಧ್ಯಕ್ಷ ಶಿವ ಚಂದ್ರಯ್ಯ ರವರು ಆಲಿ ಬಾಷಾ ರವರಿಗೆ ಸನ್ಮಾನ ಮಾಡಿ ಮಾತನಾಡಿದರು ಆಲಿ ಬಾಷ ರವರು ತಮ್ಮ ಕಾಯಕವೇ ಕೈಲಾಸ ಎಂಬಂತೆ ದುಡಿಯುತ್ತಿದ್ದು, ಜನ ಮನ್ನಣೆ ಗಳಿಸಿದ್ದಾರೆ ಆದ್ದರಿಂದ ಅವರು ನೂತನ ಬೆಸ್ಕಾಂ ಅಧಿಕಾರಿಯಾಗಿ ಆಯ್ಕೆಯಾಗಿದ್ದು ಖುಷಿಯ ವಿಚಾರ. ವಿದ್ಯುತ್ ಗೆ ಸಂಬಂಧಿಸಿದಂತೆ ಸಾಮಾನ್ಯ ಜನರ ಹಾಗೂ ಬಡವರ ಸಮಸ್ಯೆಗಳಿಗೆ ಸ್ಪಂಧಿಸಿ ಇನ್ನೂ ಎತ್ತರದ ಸ್ಥಾನ ಅಲಂಕರಿಸಲಿ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ನರಸಾಪುರ ಗ್ರಾಮದ ಆಕಾಶ್ ಹಾಲೊ ಬ್ರಿಕ್ಸ್ ಮಾಲೀಕರಾದ ನಾರಾಯಣಸ್ವಾಮಿ, ಕನ್ನಡ ಸೇನೆಯ ಕೋಲಾರ ತಾಲೂಕು ಅಧ್ಯಕ್ಷರು ಶಿವಚಂದ್ರಯ್ಯ, ನರಸಾಪುರ ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಜಾಲಿ ಶ್ರೀನಿವಾಸ್, ಕೋಲಾರ ತಾಲೂಕು ಪ್ರಧಾನ ಕಾರ್ಯದರ್ಶಿ ಚಲ್ಲಹಳ್ಳಿ ನಾಗರಾಜ್ ಮತ್ತು ಅವಿನಾಶ್ ಹಾಗೂ ಇತರರು ಇದ್ದರು.
