ಉದಯವಾಹಿನಿ , ನವದೆಹಲಿ: ಸಿನಿಮಾಗಳು ಬಹಳ ಜನಪ್ರಿಯವಾದಾಗ, ಅವು ದೊಡ್ಡ ಪರದೆಗಳಲ್ಲೇ ಸೀಮಿತವಾಗಿರುವುದು ತುಂಬಾ ಅಪರೂಪ. ಕೆಲವು ದೃಶ್ಯಗಳು ಅಥವಾ ಸಂಭಾಷಣೆಗಳು ಮೀಮ್ಸ್‌ಗಳಾಗಿ ಮಾರ್ಪಟ್ಟು, ಸಾಮಾಜಿಕ ಮಾಧ್ಯಮಗಳಿಗಲ್ಲಿ ವೈರಲ್ ಆಗುತ್ತವೆ. ಕೆಲವೊಂದು ಸಿನಿಮಾಗಳು ಜೀವನ ಮೌಲ್ಯವನ್ನೂ ಕಲಿಸುತ್ತವೆ. ಇದೀಗ ದೆಹಲಿ ಪೊಲೀಸ್‌ ಇಲಾಖೆಯೂ ಈ ಟ್ರೆಂಡ್‌ಗೆ ಕೈಜೋಡಿಸಿದೆ. ತಮ್ಮ ಅದ್ಭುತ ಸೃಜನಶೀಲತೆಯಿಂದ ಮೀಮ್ಸ್ ಬಳಸಿಕೊಂಡು ಅಗತ್ಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಕ್ಕೆ ತಲುಪಿಸುವಲ್ಲಿಯೂ ಈ ಇಲಾಖೆ ಪ್ರಸಿದ್ಧ.
ದೆಹಲಿ ಪೊಲೀಸರು ಧುರಂಧರ್ ಚಿತ್ರದಿಂದ ಎರಡು ದೃಶ್ಯಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಅವು ಮಾದಕ ವಸ್ತು ವ್ಯಸನದ ಬಗ್ಗೆ ಸಂದೇಶವನ್ನು ಹೊಂದಿದ್ದಾಗಿವೆ. ಅಕ್ಷಯ್ ಖನ್ನಾ, ರಾಜಕಾರಣಿ–ಡಾನ್ ರೆಹ್ಮಾನ್ ದಕೈತ್ ಪಾತ್ರದಲ್ಲಿ, ಗಲ್ಫ್ ಕಲಾವಿದ ಫ್ಲಿಪ್ಪೆರಾಚಿ ಅವರ ಬಹ್ರೇನ್ ರ್ಯಾಪ್ ಹಾಡಿಗೆ ಪ್ರವೇಶಿಸುವ ಸನ್ನಿವೇಶ ಇಲ್ಲಿದೆ.
ಅಕ್ಷಯ್ ಖನ್ನಾ ಅಭಿನಯಿಸಿದ ರೆಹ್ಮಾನ್ ದಕೈತ್ ಸ್ಟೈಲಿನಲ್ಲಿ ಕಾರಿನಿಂದ ಇಳಿದು ಬರುತ್ತಾನೆ. ಅಲ್ಲಿದ್ದವರಿಗೆ ಅಭಿನಂದನೆ ಸಲ್ಲಿಸುತ್ತಾನೆ ಮತ್ತು ಅರಬ್ ಸಂಗೀತಕ್ಕೆ ಸಂಭ್ರಮದಿಂದ ನೃತ್ಯ ಮಾಡುತ್ತಾನೆ. ಈ ಎಂಟ್ರಿ ಸೀನಿಗೆ ದೆಹಲಿ ಪೊಲೀಸರು ಸೇರಿಸಿದ ಪಠ್ಯ ಹೀಗಿತ್ತು: ದೆಹಲಿ ಪೊಲೀಸರು ನೀವು ನಶೆಯಲ್ಲಿದ್ದಾಗ ಹೀಗಿ ಇರುತ್ತೀರಿ ಅದೇ ನಶೆ ಇಳಿದಾಗ ಇದೇ ರೀತಿ ನೆಲದಲ್ಲಿ ಬಿದ್ದು ಹೊರಳಾಡುತ್ತೀರಿ ಎಂದು ತೋರಿಸಲಾಗಿದೆ.

ಮಾದಕ ದ್ರವ್ಯಗಳಿಗೆ ಬೇಡ ಎಂಬ ಬಲವಾದ ಸಂದೇಶದೊಂದಿಗೆ ವಿಡಿಯೊ ಕೊನೆಗೊಂಡಿತು. ನಿಮ್ಮ ಜೀವನದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಏಕೆಂದರೆ ಮಾದಕ ದ್ರವ್ಯಗಳು ಕೇವಲ ಭ್ರಮೆಯನ್ನು ನೀಡುತ್ತವೆ ಎಂದು. ಅದೇ ಸಮಯದಲ್ಲಿ, ಮಾದಕ ವಸ್ತುಗಳ ಅತಿಯಾದ ಸೇವನೆಯು ನಿಜವೆಂದು ಭಾವಿಸಬಹುದು. ಆದರೆ ಅದು ಭ್ರಮೆ. ಕ್ಷಣಿಕ ಭ್ರಮೆಗೆ ನಿಮ್ಮ ಜೀವನವನ್ನು ಬಲಿ ಕೊಡಬೇಡಿ ಎಂದು ಜಾಗೃತಿಯನ್ನು ಮೂಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!