ಉದಯವಾಹಿನಿ ಕುಶಾಲನಗರ :ಕೊಡಗಿನಲ್ಲಿ ಈ ಬಾರಿ ಮಳೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಹಿನ್ನಿರು ಬರಿದಾಗಿದೆ.
ಹೀಗೆ ಬರಿದಾದ ಜಲಾಶಯದ ಒಡಲಿನಲ್ಲಿ ಇತಿಹಾಸವನ್ನು ತಿಳಿಸಿ ಕೊಡುವ ಸಾಕ್ಷಾಧಾರ ಒಂದು ಗೋಚರಿಸಿದೆ. ಕುಶಾಲನಗರ ತಾಲೂಕು ಹೇರೂರು ಗ್ರಾಮದಲ್ಲಿ ಇತ್ತೀಚಿಗಷ್ಟೇ ‘ನಿಲಸುಗಲ್ಲು’ ಸಮಾಧಿ ಸಂಶೋಧಿಸಿದ ಇತಿಹಾಸಕಾರರು ಈಗ “ತುರುಗೋಳ್” (ಗೋವಿನ ಕರುವಿನ ರಕ್ಷಣೆ) ಶಾಸನ ಇರುವ ವೀರಗಲ್ಲು ಪತ್ತೆಯಾಗಿದೆ. ಅಲ್ಲದೆ ವೀರ ಮಾಸ್ತಿಗಲ್ಲು ಹಾಗೂ ಗಂಗಾ ಹೊಯ್ಸಳ ವಿಜಯನಗರ ಕಾಲದ ಏಕಕೂಟ ಶೈವ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಹಾರಂಗಿ ನೀರು ಪ್ರದೇಶ ಐತಿಹಾಸಿಕ ಸಂಗತಿಗಳಿಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇಲ್ಲಿ ದೊಡ್ಡದಾದ ಹೇರೂರು ಬೆಟ್ಟ ದಟ್ಟ ಕಾಡು ಪ್ರಶಾಂತವಾಗಿ ಹರಿಯುವ ಉಪನದಿ ಹಾರಂಗಿ ಒಂದು ನಾಗರಿಕತೆ ಬದುಕಿ ಬಾಳಿದ ಕಥೆಗಳನ್ನು ಬೆಳಕು ಚೆಲ್ಲಲು ಇನ್ನೇನು ಬೇಕು?
ತುರುಗೋಳ್ ವೀರಗಲ್ಲು ಕಂಡುಬರುವುದು ತೀರ ಅಪರೂಪ ಎನ್ನುತ್ತಾರೆ ಇತಿಹಾಸಕಾರರು ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಗೋವುಗಳನ್ನು ಸಾಕಲಾಗುತ್ತಿತ್ತು.
ಹೇರೂರು ಪ್ರದೇಶವು ಅರಣ್ಯವಾಗಿದ ಕಾರಣ ಮೊದಲು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳ ಸಾಕಣೆ ನಡೆಯುತ್ತಿದ್ದಿರಬಹುದು ಹಾಗಾಗಿ ಇಲ್ಲಿ ತುರುಗೋಳ್ ವೀರಗಲ್ಲಿನ ವಿಶೇಷವಾಗಿದೆ.
ಕೊಡಗಿನಲ್ಲಿ ಅಪರೂಪ ಆಗಿರುವ ತುರುಗೋಳ್ ವೀರಗಲ್ಲು ಚಿಕ್ಕಮಗಳೂರು ಭಾಗದಲ್ಲಿ ಸಿಕ್ಕಿದೆ ಗೋವು ಗಳಿಂದ ಹೆಚ್ಚಿನ ಆರ್ಥಿಕ ಲಾಭ. ರಾಜ್ಯದ ಅಭಿವೃದ್ಧಿ. ಸಂಪತ್ತು ಎಂದು ನಂಬಿ ಆಡಳಿತ ಮಾಡುವ ರಾಜ್ಯದಲ್ಲಿ ದೇವಾಲಯದ ಮುಂಭಾಗ ನಂದಿ ವಿಗ್ರಹ ಕೆತ್ತನೆ ಮಾಡಿ ಆರಾಧಿಸುತ್ತಿದ್ದರು.
