
ಉದಯವಾಹಿನಿ: ಮುಂಬೈ: ತವರಿನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ದದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 101 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದೀಗ ಎರಡನೇ ಪಂದ್ಯದಲ್ಲಿ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆರಂಭಿಕ ಅಭಿಷೇಕ್ ಶರ್ಮಾ ಕೀ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ವಿರಾಟ್ ಕೊಹ್ಲಿಯ ವಿಶೇಷ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಅವರು ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿ ಬಾಕಿ ಇರುವ ನಾಲ್ಕು ಇನಿಂಗ್ಸ್‌ಗಳಲ್ಲಿ 99 ರನ್ ಬಾರಿಸಿದರೆ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20ಐ ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಈ ದಾಖಲೆ ವಿರಾಟ್ ಕೊಹ್ಲಿಯವರ ಹೆಸರಿನಲ್ಲಿದೆ. ಅವರು 2016ರಲ್ಲಿ 29 ಇನಿಂಗ್ಸ್‌ಗಳಿಂದ 1614 ರನ್ ಕಲೆಹಾಕಿದ್ದರು. ವಿರಾಟ್ ಕೊಹ್ಲಿಯ ಈ ದಾಖಲೆಯ ಮೇಲೆ ಅಭಿಷೇಕ್ ಶರ್ಮಾ ಕಣ್ಣಿಟ್ಟಿದ್ದಾರೆ. ಅಭಿಷೇಕ್ ಶರ್ಮಾ ಅವರು ಈ ವರ್ಷದಲ್ಲಿ 37 ಇನಿಂಗ್ಸ್‌ಗಳನ್ನಾಡಿದ್ದು, 1516 ರನ್ ಬಾರಿಸಿದ್ದಾರೆ. ಇನ್ನು 99 ರನ್ ಬಾರಿಸಿದರೆ ಅವರು ಈ ದಾಖಲೆಯನ್ನು ಬರೆಯಲಿದ್ದಾರೆ.
ಅವರಿಗೆ ಈ ವರ್ಷದಲ್ಲಿ ಆಡಲು ಸಿಗುವುದು ಕೇವಲ 4 ಇನಿಂಗ್ಸ್‌ಗಳು ಮಾತ್ರ. ಏಕೆಂದರೆ ಭಾರತ ಮತ್ತು ದಕ್ಷಿಣ ಆಪ್ರಿಕಾ ನಡುವೆ ನಡೆಯುತ್ತಿರುವ ಟಿ20ಐ ಸರಣಿ ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಮುಂದಿನ ವರ್ಷ ಆರಂಭದಲ್ಲಿ ಆಡಲಿದೆ. ನಂತರ ನಡೆಯುವ ಟಿ20ಐ ಸರಣಿಯನ್ನು ಆಡಲಿದೆ. ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಅವರ ಜೊತೆ ಆರಂಭಿಕರಾಗಿ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವುದರಿಂದ ಅವರಿಗೆ ಈ ದಾಖಲೆ ಮುರಿಯಲು ಸಾಕಷ್ಟು ಅವಕಾಶವಿದೆ.
