ಉದಯವಾಹಿನಿ, ಅಹಮದಾಬಾದ್‌ : ತನ್ನ ಗಂಡನನ್ನು ಹೊಗಳುವ ಬರದಲ್ಲಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜ ಅವರು ಟೀಮ್‌ ಇಂಡಿಯಾದ ಆಟಗಾರರ ಬಗ್ಗೆ ನೀಡಿರುವ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ರವೀಂದ್ರ ಜಡೇಜಾ ಯಾವುದೇ ರೀತಿಯ ದುಷ್ಕೃತ್ಯದಲ್ಲಿ ಎಂದಿಗೂ ಭಾಗಿಯಾಗಿಲ್ಲ. ಆದರೆ ವಿದೇಶಿ ಪ್ರವಾಸದಲ್ಲಿ ಸಹ ಆಟಗಾರರು ಹಲವು ದುಷ್ಕೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುಜರಾತ್‌ನ ಶಿಕ್ಷಣ ಸಚಿವೆಯಾಗಿರುವ ರಿವಾಬಾ ಜಡೇಜಾ, ಇತ್ತೀಚೆಗೆ ತಮ್ಮ ಭಾಷಣದ ಸಮಯದಲ್ಲಿ ತಮ್ಮ ಪತಿ ರವೀಂದ್ರ ಜಡೇಜಾ ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಆಡುತ್ತಾರೆ. ಆದರೆ ಅವರು ಯಾವುದೇ ರೀತಿಯ ದುಷ್ಕೃತ್ಯದಲ್ಲಿ ಎಂದಿಗೂ ಭಾಗಿಯಾಗಿಲ್ಲ ಎಂದು ಹೇಳಿದ್ದರು. ಇದೇ ವೇಳೆ ವಿದೇಶಿ ಪ್ರವಾಸಗಳಲ್ಲಿ ಅನೇಕ ಭಾರತೀಯ ಆಟಗಾರರು ದುಷ್ಕೃತ್ಯದಲ್ಲಿ ತೊಡಗುತ್ತಾರೆ ಎಂದು ರಿವಾಬಾ ಹೇಳಿಕೊಂಡಿದ್ದರು. ಅವರು ಯಾರನ್ನೂ ಹೆಸರಿಸದಿದ್ದರೂ, ಅವರ ಹೇಳಿಕೆಯು ಭಾರತೀಯ ತಂಡದಲ್ಲಿನ ಆಟಗಾರರ ಇಮೇಜ್ ಮತ್ತು ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Leave a Reply

Your email address will not be published. Required fields are marked *

error: Content is protected !!