ಉದಯವಾಹಿನಿ, ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ದೊರೆಯುವ ತರಕಾರಿಗಳಲ್ಲಿ ಬದನೆಕಾಯಿ ಕೂಡ ಒಂದು. ಬದನೆಕಾಯಿಯಿಂದ ಪಲ್ಯ, ಕರಿ, ಬಜ್ಜಿ ಹೀಗೆ ವಿವಿಧ ರೀತಿಯಲ್ಲಿ ಅಡುಗೆಗಳನ್ನು ತಯಾರಿಸುತ್ತಾರೆ. ಇದಕ್ಕೆ ತರಕಾರಿಗಳ ಪಟ್ಟಿಯಲ್ಲಿ ವಿಶೇಷ ಸ್ಥಾನವಿದೆ. ಬದನೆಕಾಯಿ ಬಳಸಿ ತಯಾರಿಸುವಂತಹ ಅಡುಗೆಗಳು ತುಂಬಾ ರುಚಿಕರವಾಗಿರುತ್ತವೆ.ಜೋಳದ ರೊಟ್ಟಿ, ಪರೋಟ, ಚಪಾತಿ, ತಂದೂರಿ ರೋಟಿ ಹಾಗೂ ಬಿರಿಯಾನಿಗಳ ಜೊತೆಗೆ ತಿನ್ನಲು ಬಗಾರ ಬೈಂಗನ್ ಕರಿ ಒಮ್ಮೆ ತಯಾರಿಸಿ ನೋಡಿ. ರೆಸಿಪಿಯ ರುಚಿ ಅದ್ಭುತವಾಗಿರುತ್ತದೆ. ಈ ಖಾದ್ಯದ ವಿಶೇಷವೆಂದರೆ ಬದನೆಕಾಯಿಗೆ ಹುಣಸೆಹಣ್ಣನ್ನು ಸೇರಿಸಿ ಸಿದ್ಧಪಡಿಸಲಾಗುತ್ತದೆ. ಇದೀಗ ಮನೆಯಲ್ಲಿ ಸಖತ್ ಟೇಸ್ಟಿಯಾದ ಬಗಾರ ಬೈಂಗನ್ ತಾಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.ಬದನೆಕಾಯಿ – ಅರ್ಧ ಕೆಜಿ
ಶೇಂಗಾ – 2 ಟೀಸ್ಪೂನ್ ತೆಂಗಿನಕಾಯಿ ತುರಿ – 2 ಟೀಸ್ಪೂನ್, ಧನಿಯಾ – 1 ಟೀಸ್ಪೂನ್, ಜೀರಿಗೆ – ಅರ್ಧ ಟೀಸ್ಪೂನ್
ಎಳ್ಳು – 1 ಟೀಸ್ಪೂನ್, ಈರುಳ್ಳಿ – 2, ಹುಣಸೆಹಣ್ಣು – ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ¼ ಟೀಸ್ಪೂನ್, ಖಾರದ ಪುಡಿ – 2 ಟೀಸ್ಪೂನ್, ಉಪ್ಪು – ಅರ್ಧ ಟೀಸ್ಪೂನ್
ಕರಿಬೇವು – 1 ಚಿಗುರು, ಹಸಿಮೆಣಸಿನಕಾಯಿ – 4
ಕೊತ್ತಂಬರಿ ಸೊಪ್ಪು – ಸ್ವಲ್ಪ
ಅತ್ಯಂತ ರುಚಿಕರವಾದ ಬಗಾರ ಬೈಂಗನ್ ತಯಾರಿಸಲು ಮೊದಲಿಗೆ ಒಲೆಯ ಮೇಲೆ ಪ್ಯಾನ್ ಇಟ್ಟು ಶೇಂಗಾ ಹಾಗೂ ಒಣ ತೆಂಗಿನಕಾಯಿ ತುಂಡುಗಳನ್ನು ಎಣ್ಣೆ ಇಲ್ಲದೆ ಕಡಿಮೆ ಉರಿಯಲ್ಲಿ ಹುರಿಯಿರಿ.ಬಳಿಕ ಕೊತ್ತಂಬರಿ ಬೀಜ ಹಾಗೂ ಜೀರಿಗೆಯನ್ನು ಹುರಿಯಿರಿ. ಇದಾದ ಬಳಿಕ ಒಲೆ ಆಫ್ ಮಾಡಿ. ಎಳ್ಳು ಸೇರಿಸಿ ಹುರಿದು ಅವುಗಳನ್ನು ಪಕ್ಕಕ್ಕೆ ಇಡಿ.
ಇದೀಗ ಅದೇ ಪ್ಯಾನ್‌ಗೆ ಎಣ್ಣೆ ಹಾಕಿ ಅದು ಬಿಸಿಯಾದಾಗ, ತೆಳುವಾಗಿ ಹಾಗೂ ಉದ್ದವಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. ಇವುಗಳನ್ನು ಕಡಿಮೆ ಉರಿಯಲ್ಲಿ ಹುರಿದು ಹೊರತೆಗೆಯಿರಿ.
