ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ. ಮಾರುಕಟ್ಟೆಯಲ್ಲಿ ಬಾಳೆಹಣ್ಣನ್ನು ಸಹ ಹಣ್ಣಾಗಿಸಲು ಕಾರ್ಬೈಡ್ ಅನ್ನು ಬಳಸಲಾಗುತ್ತಿದೆ. ಈ ರೀತಿಯ ಹಣ್ಣುಗಳನ್ನು ಸೇವನೆ ಮಾಡುವುದರಿಂದ ದೇಹದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ರಾಸಾಯನಿಕದಿಂದ ಬಾಳೆಹಣ್ಣನ್ನು ಮಾಗಿಸಿರುವುದನ್ನು ಹೀಗೆ ಗುರುತಿಸಿ: ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ವಿವಿಧ ಪ್ರಯೋಜನಗಳು ಲಭಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು, ರೋಗಗಳು ಬರದಂತೆ ತಡೆಗಟ್ಟಲು ಸಹಾಯ ಮಾಡುವ ವಿವಿಧ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇಂದಿನ ಕಲಬೆರಕೆಯ ಯುಗದಲ್ಲಿ ಆಹಾರದ ಸತ್ಯಾಸತ್ಯತೆಯನ್ನು ಸಹ ನಂಬುವುದು ತುಂಬಾ ಅಸಾಧ್ಯವಾಗಿದೆ.
ಮಾರುಕಟ್ಟೆಯಲ್ಲಿ ಬಾಳೆಹಣ್ಣನ್ನು ಹಣ್ಣಾಗಿಸಲು ಕಾರ್ಬೈಡ್ ಅನ್ನು ಬಳಸಲಾಗುತ್ತಿದೆ ಎಂಬುದು ಗಮನಿಸಬೇಕು. ಈ ರಾಸಾಯನಿಕದಿಂದ ಮಾಗಿದ ಬಾಳೆಹಣ್ಣನ್ನು ಸೇವಿಸುವುದರಿಂದ ಅನೇಕ ರೋಗಗಳಿಂದ ಅಪಾಯ ಉಂಟಾಗಬಹುದು. ಇದರಿಂದ ಬಾಳೆಹಣ್ಣನ್ನು ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಲಾಗಿದೆಯಾ ಎಂದು ಗುರುತಿಸಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಬಾಳೆಹಣ್ಣನ್ನು ಖರೀದಿಸುವ ಮೊದಲು ಈ ವಿಧಾನಗಳನ್ನು ಪಾಲಿಸಬಹುದು.

ಬಣ್ಣದಿಂದ ಪತ್ತೆ ಮಾಡೋದು ಹೇಗೆ? ರಾಸಾಯನಿಕದಿಂದ ಮಾಗಿದ ಬಾಳೆಹಣ್ಣನ್ನು ಅದರ ಬಣ್ಣದಿಂದ ಪತ್ತೆ ಮಾಡಬಹುದು. ಬಾಳೆಹಣ್ಣು ನಯವಾದ ಮತ್ತು ತಿಳಿ ಹಳದಿ ಬಣ್ಣದ್ದಾಗಿದ್ದು, ಕೆಲವು ಹಸಿರು ಕಲೆಗಳನ್ನು ಹೊಂದಿದ್ದರೆ ಇವು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣು ಆಗಿರಬಹುದು. ಬಾಳೆಹಣ್ಣು ಕಡು ಹಳದಿ ಬಣ್ಣದ್ದಾಗಿದ್ದು, ಕಪ್ಪು ಕಲೆಗಳನ್ನು ಹೊಂದಿದ್ದರೆ ಇವು ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣು ಆಗಿರಬಹುದು.

ನೈಸರ್ಗಿಕವಾಗಿ ಮಾಗಿದ ಮತ್ತು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳ ನಡುವೆ ಅವುಗಳ ವಾಸನೆಯಿಂದ ವ್ಯತ್ಯಾಸವನ್ನು ಕಂಡುಹಿಡಿಯಬಹುದು. ಬಾಳೆಹಣ್ಣು ಸಿಹಿ, ತಾಜಾ ಸುವಾಸನೆಯನ್ನು ಹೊರಸೂಸಿದರೆ ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣು ಆಗಿರಬಹುದು. ಇದರಿಂದ ರಾಸಾಯನಿಕದಂತಹ ವಾಸನೆ ಕಂಡುಬಂದರೆ ಅದನ್ನು ರಾಸಾಯನಿಕಗಳ ಸಹಾಯದಿಂದ ಹಣ್ಣಾಗಿಸಲಾಗಿದೆ ಎಂದು ಗಮನಿಸಬೇಕಾಗುತ್ತದೆ. ಈ ವಿಷಕಾರಿ ಬಾಳೆಹಣ್ಣುಗಳನ್ನು ಖರೀದಿಸುವುದು ಉತ್ತಮವಲ್ಲ ಎಂದು ಆರೊಗ್ಯ ತಜ್ಞರು ತಿಳಿಸುತ್ತಾರೆ.

ನೀರಿನಿಂದ ಗುರುತಿಸುವುದು ಹೇಗೆ? ಬಕೆಟ್ ಇಲ್ಲವೇ ಪಾತ್ರೆಯಲ್ಲಿ ನೀರಿನಿಂದ ತುಂಬಿಸಿ ಬಾಳೆಹಣ್ಣನ್ನು ಅದರಲ್ಲಿ ಇಡಬೇಕು. ಬಾಳೆಹಣ್ಣು ಕೆಳಭಾಗಕ್ಕೆ ಮುಳುಗಿದರೆ ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣು ಎಂದರ್ಥ. ಬಾಳೆಹಣ್ಣು ಮುಳುಗದಿದ್ದರೆ ಅದು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣು ಆಗಿರಬಹುದು.

Leave a Reply

Your email address will not be published. Required fields are marked *

error: Content is protected !!