ಉದಯವಾಹಿನಿ, ಚೆನ್ನೈ : ತಮಿಳುನಾಡಿನ ತಿರುಪಾರನುಕುಂಡ್ರಮ್ ಎಂಬಲ್ಲಿ ‘ಕಾರ್ತಿಕ ದೀಪಂʼ ಅಥವಾ ‘ಕಾರ್ತಿಗೈ ದೀಪಂʼಉತ್ಸವ ಕುರಿತು ಉಂಟಾಗಿರುವ ವಿವಾದವು ಡಿಎಂಕೆ ಪಕ್ಷದ ಅಸಲಿ ಬಣ್ಣವನ್ನು ಬಯಲಿಗೆಳೆದಿದೆ. ತಿರುಪಾರನುಕುಂಡ್ರಮ್‌ನ ಬೆಟ್ಟದಲ್ಲಿ ಶತಶತಮಾನಗಳಿಂದಲೂ ಪರಂಪರಾನುಗತವಾಗಿ ಭಕ್ತಾದಿಗಳು ಕಾರ್ತಿಕ ದೀಪಂ ಉತ್ಸವವನ್ನು ಸಂಭ್ರಮ, ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ಸ್ವತಃ ವಕ್ಫ್ ಮಂಡಳಿ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಸ್ವತಃ ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪಂ ಉತ್ಸವ ನಡೆಸದಂತೆ ಹೇಳಿರುವುದು ಭಾರಿ ವಿವಾದ ಸೃಷ್ಟಿಸಿದೆ. ಹೈಕೋರ್ಟ್ ಕೂಡ ಕಾರ್ತಿಕ ದೀಪ ಬೆಳಗಿಸುವ ಪರಂಪರೆಯನ್ನುಪುರಸ್ಕರಿಸಿದ್ದರೂ, ಡಿಎಂಕೆ ಸರಕಾರ ಮಾತ್ರ ಕಾರ್ತಿಕ ದೀಪ ಬೆಳಗುವುದನ್ನು ಅಪರಾಧದಂತೆ ಕಾಣುತ್ತಿರುವುದು ಆ ಪಕ್ಷದ ಮುಖವಾಡವನ್ನು ಕಳಚಿಟ್ಟಿದೆ. ಇದು ಖಂಡಿತ ಆಡಳಿತವಲ್ಲ, ಹಿಂದೂ ನಂಬಿಕೆಗಳ ವಿರುದ್ಧ ಮಾಡಿರುವ ಘೋರ ಅಪಚಾರ. ಮಾತ್ರವಲ್ಲದೆ ಇದು ನ್ಯಾಯಾಂಗದ ನಿಂದನೆಯೂ ಆಗಿದೆ. ನ್ಯಾಯಾಂಗವನ್ನೇ ಧಿಕ್ಕರಿಸು ಪ್ರಯತ್ನಕ್ಕೆ ಡಿಎಂಕೆ ಕೈ ಹಾಕಿದಂತಾಗಿದೆ.ತಮಿಳುನಾಡಿನ ಡಿಎಂಕೆ ನೇತೃತ್ವದ ಸರಕಾರದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (ಎಚ್‌ಆರ್ & ಸಿಇ) ಸಚಿವರಾದ ಪಿ.ಕೆ. ಶೇಖರ್ ಬಾಬು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
