ಉದಯವಾಹಿನಿ,
ಜೈಪುರ: ರಾಜಸ್ಥಾನದ ಜೋಧಪುರದಲ್ಲಿ ಪ್ರಿಯಕರನ ಎದುರಲ್ಲೇ 17 ವರ್ಷದ ಪರಿಶಿಷ್ಟ ಜಾತಿಯ ಯುವತಿಯ ಮೇಲೆ ಮೂವರು ಕಾಲೇಜು ವಿದ್ಯಾರ್ಥಿಗಳು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದು, ಇವರು ಅತ್ಯಾಚಾರಕ್ಕೂ ಮುನ್ನ ಯುವತಿಯ ಪ್ರಿಯಕರನ ಮೇಲೆ ಹಲ್ಲೆ ಎಸಗಿದ್ದರು ಎಂದು ಹೇಳಿದ್ದಾರೆ. ಯುವತಿ ಪ್ರಿಯಕರನ ಜೊತೆ ಅಜ್ಮೀರ್‌ನಿಂದ ಶನಿವಾರ ಜೋಧಪುರಕ್ಕೆ ಓಡಿ ಹೋಗಿದ್ದು, ಅಲ್ಲಿನ ಪಾವಟ ಚೌರಾಹ ಎಂಬಲ್ಲಿಗೆ ತೆರಳಿದ್ದರು. ಅಲ್ಲಿ ಆರೋಪಿಗಳಾದ ಸಮಂದರ್ ಸಿಂಗ್ ಭಾಟಿ, ಧರ್ಮಪಾಲ್ ಸಿಂಗ್ ಮತ್ತು ಭಟ್ಟಂ ಸಿಂಗ್ ಇವರಿಗೆ ನೆರವಿನ ಭರವಸೆ ನೀಡಿದ್ದರು. ಬಳಿಕ ಇಬ್ಬರನ್ನೂ ವಿಶ್ವವಿದ್ಯಾಲಯವೊಂದರ ಮೈದಾನಕ್ಕೆ ಕರೆದೊಯ್ದಿದ್ದುದ, ಅಲ್ಲಿ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ವಿದ್ಯಾರ್ಥಿ ಮುಖಂಡನ ಪರವಾಗಿ ಈ ಆರೋಪಿಗಳು ಪ್ರಚಾರ ನಡೆಸುತ್ತಿದ್ದರು ಎಂದೂ ಹೇಳಿದ್ದಾರೆ. ಆದರೆ ಆರೋಪಿಗಳಿಗೂ ಎಬಿವಿಪಿಗೂ ಸಂಬಂಧವಿಲ್ಲ ಎಂದು ಅದರ ಮುಖಂಡರು ತಿಳಿದ್ದಾರೆ.
