ಉದಯವಾಹಿನಿ: ಬಹುನಿರೀಕ್ಷಿತ 2026 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 359 ಆಟಗಾರರು ಬಿಡ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸಿ ರನ್ನರ್ ಅಪ್ ಆಗಿದ್ದ ಪಂಜಾಬ್ ಕಿಂಗ್ಸ್ ಬಗ್ಗೆ ಇದೀಗ ಚರ್ಚಿಸೋಣ. 2025ರ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಅದ್ಭುತ ಪ್ರದರ್ಶನವನ್ನು ತೋರಿತ್ತು ಹಾಗೂ ಅತ್ಯುತ್ತಮ ಕ್ರಿಕೆಟ್ ಆಡುತ್ತಾ ಫೈನಲ್ ತಲುಪಿತ್ತು. ಇದೀಗ, ಈ ವರ್ಷದ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಟಾರ್ಗೆಟ್ ಮಾಡಬಹುದಾದ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯ್ನಿಸ್, ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸೆನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಲಾಕಿ ಫರ್ಗ್ಯೂಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕ್ಸಿವಿಯರ್ ಬಾರ್ಲೆಟ್, ಪೈಲಾ ಅವಿನಾಶ್, ಸರ್ಯಾಂಶ್ ಶಡ್ಜೆ, ಹರ್ನೂರ್ ಸಿಂಗ್.
