ಉದಯವಾಹಿನಿ, ಬಿಗ್‌ಬಾಸ್ ಮನೆಯಿಂದ ಹೊರ ಬಂದು ಸದ್ಯ ಸೀಕ್ರೆಟ್‌ರೂಮಿನಲ್ಲಿರುವ ಧ್ರುವಂತ್ ಜೊತೆ ಒಂದೇ ರೂಮಿನಲ್ಲಿ ಜೊತೆಯಾಗಿ ಹೇಗೆ ಇರುವುದು ಹೇಳಿ ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ವೀಕ್ಷಕರಿಗೆ ವೋಟಿಂಗ್ ಆಯ್ಕೆ ನೀಡದ ಕಾರಣ ಯಾರನ್ನೂ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳುಹಿಸಿರಲಿಲ್ಲ. ಆದರೆ ಸುದೀಪ್ ಕಾರ್ಯಕ್ರಮದಲ್ಲಿ ಎಲಿಮಿನೇಶನ್ ಪ್ರಕ್ರಿಯೆ ಮಾಡಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮನೆಯಿಂದ ಹೊರ ಕಳುಹಿಸಿ ಮನೆಯವರಿಗೆ ಶಾಕ್ ಕೊಟ್ಟಿದ್ದರು.
ಮನೆಯಿಂದ ಹೊರ ಬಂದ ರಕ್ಷಿತಾ ಮತ್ತು ಧ್ರುವಂತ್ ಇಬ್ಬರನ್ನು ಈಗ ರಹಸ್ಯ ಕೋಣೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ಟಿವಿಯಲ್ಲಿ ಬಿಗ್ ಬಾಸ್ ಮನೆಯ ಚಟುವಟಿಕೆಯನ್ನು ನೋಡುತ್ತಿದ್ದಾರೆ.ಧ್ರುವಂತ್ ಮತ್ತು ರಕ್ಷಿತಾ ಮೊದಲು ಬಹಳ ಚೆನ್ನಾಗಿದ್ದರು. ಆದರೆ ಮಲ್ಲಮ್ಮ ಮನೆಯಿಂದ ಹೊರ ಬಂದ ಬಳಿಕ ರಕ್ಷಿತಾ ಮತ್ತು ಧ್ರುವಂತ್ ಅವರ ಸಂಬಂಧ ಹಾಳಾಗಿತ್ತು. ಇಬ್ಬರು ಪರಸ್ಪರ ಜಗಳ ಮಾಡಿದ್ದರು. ಮನೆಯಲ್ಲಿ ಇದ್ದಾಗಲೂ ಇಬ್ಬರು ಅಷ್ಟೊಂದು ಮಾತನಾಡುತ್ತಿರಲಿಲ್ಲ.
