ಉದಯವಾಹಿನಿ, ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನ ಜೈಲರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಟ್ರೇಡ್ ಮಾರ್ಕ್ ಕ್ರಿಯೇಟ್ ಮಾಡಿದೆ. ಇದೀಗ ಪಾರ್ಟ್-2 ಸಿನಿಮಾ ಸದ್ದಿಲ್ಲದೇ ಶೂಟಿಂಗ್ ಮುಗಿಸುವತ್ತ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಈ ಸಿನಿಮಾಗೆ ಒಬ್ಬೊಬ್ಬರೇ ಕಲಾವಿದರು ಸೇರಿಕೊಳ್ಳುತ್ತಾ ಟೀಂ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ.
ಜೈಲರ್ ಸಿನಿಮಾದಲ್ಲಿ ಸೌತ್‌ನ ಸ್ಟಾರ್ ನಟರು ಸಖತ್ ವೇಟೇಜ್ ನೀಡಿದ್ದಾರೆ. ಇದೀಗ ಪಾರ್ಟ್-2 ಸಿನಿಮಾದಲ್ಲೂ ದೊಡ್ಡ ತಾರಾಗಣವಿರಲಿದೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್ ಕೂಡಾ ಮೊದಲ ಪಾರ್ಟ್ನಂತೆ ಪಾರ್ಟ್-2 ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಜೈಲರ್-2 ಸಿನಿಮಾದ ವಿಶೇಷ ಪಾತ್ರದಲ್ಲಿ ವಿದ್ಯಾ ಬಾಲನ್ ಅಭಿನಯಿಸುತ್ತಿದ್ದಾರಂತೆ.
ವಿದ್ಯಾ ಬಾಲನ್ ಅವರನ್ನ ಬಾಲಿವುಡ್‌ನಿಂದ ಕರೆತರೋಕೆ ಮುಖ್ಯ ಕಾರಣ ಕೂಡಾ ಇದೆ. ಈ ಸಿನಿಮಾದಲ್ಲಿ ಟ್ವಿಸ್ಟ್ ಅಂಡ್ ಟರ್ನ್ ಕೊಡು ಒಂದು ಇಂಪಾರ್ಟೆಂಟ್ ರೋಲ್‌ನಲ್ಲಿ ವಿದ್ಯಾಬಾಲನ್ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾ ಈಗಿರುವ ಮಾಹಿತಿ ಪ್ರಕಾರ ಸದ್ಯದಲ್ಲಿಯೇ ಶೂಟಿಂಗ್ ಮುಗಿಸಿ, ಆಗಸ್ಟ್ 14ರಂದು ವರ್ಲ್ಡ್ವೈಡ್ ರಿಲೀಸ್ ಆಗಲಿದೆಯಂತೆ.
