ಉದಯವಾಹಿನಿ, ಮುಂದಿನ ಜನವರಿ ತಿಂಗಳಲ್ಲಿ ನ್ಯೂಜಿಲೆಂಡ್‌ ತಂಡ ಭಾರತದ ಪ್ರವಾಸವನ್ನು ಹಮ್ಮಿಕೊಂಡಿದೆ. ಆದರೆ, ಗಾಯಕ್ಕೆ ತುತ್ತಾಗಿರುವ ಕಿವೀಸ್‌ ವೇಗದ ಬ್ಲೈರ್‌ ಟಿಕ್ನರ್‌ ಅವರು ಭಾರತ ಪ್ರವಾಸದ ಸೀಮಿತ ಓವರ್‌ಗಳ ಸರಣಿಯಿಂದ ಹೊರ ಬಿದ್ದಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಬ್ಲೈರ್‌ ಟಿಕ್ನರ್‌ ಅವರ ಭುಜ ಸ್ಥಾನಪಲ್ಲಟಗೊಂಡಿದೆ. ಹಾಗಾಗಿ ಅವರು ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್‌ ತಂಡದಿಂದ ದೂರ ಉಳಿಯಲಿದ್ದಾರೆ. ಜನವರಿ 21 ರಂದು ಇವರು ಗುಣಮುಖರಾಗಲಿದ್ದಾರೆಂದು ಹೇಳಲಾಗುತ್ತಿದೆ.
ಬಸಿನ್‌ ರಿವರ್‌ ಅಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಬೌಂಡರಿ ಲೈನ್‌ನಲ್ಲಿ ಚೆಂಡನ್ನು ಹಿಡಿಯುವ ಪ್ರಯತ್ನದಲ್ಲಿ ಡೈವ್‌ ಹೊಡಯುವ ವೇಳೆ ಅವರ ಭುಜ ಸ್ಥಾನಪಲ್ಲಟಗೊಂಡಿದೆ. ಇದಾದ ತಕ್ಷಣ ಅವರು ಮೈದಾನವನ್ನು ತೊರೆದಿದ್ದಾರೆ ಹಾಗೂ ಟೆಸ್ಟ್‌ ಸರಣಿಯಿಂದ ಹೊಡೆ ಬಿದ್ದಿದ್ದಾರೆ. ಅವರ ಗಾಯ ಗಂಭೀರವಾಗಿರುವ ಕಾರಣ ಸಂಪೂರ್ಣವಾಗಿ ಗುಣಮುಖರಾಗಲು 6 ಅಥವಾ 12 ವಾರಗಳ ಅಗತ್ಯವಿದೆ. ಜನವರಿ 11 ರಂದು ನ್ಯೂಜಿಲೆಂಡ್‌ ತಂಡದ ಭಾರತದ ಪ್ರವಾಸ ಆರಂಭವಾಗಲಿದೆ. ಒಡಿಐ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಕಿವೀಸ್‌ ವೇಗಿ ಸಂಪೂರ್ಣ ಈ ಎರಡೂ ಸರಣಿಗಳಿಂದ ಹೊರ ನಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!